ಸಹೋದರಿಯರನ್ನು ರಕ್ಷಿಸಿದ್ದ ಕೆಎಸ್ ಆರ್ ಟಿಸಿ ಚಾಲಕನಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಡೆಸ್ಕ್
1 Min Read

ತುಮಕೂರು: ಕೆರೆ ನೀರಿನಲ್ಲಿ ಮುಳುಗುತ್ತಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರು ಸಹೋದರಿಯರನ್ನು ರಕ್ಷಿಸಿದ್ದ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ ಚಾಲಕ ಮಂಜುನಾಥ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಲಿದೆ.

ಕಳೆದ ಜನವರಿ ತಿಂಗಳಲ್ಲಿ ಶಿರಾ ತಾಲೂಕಿನ ಹಂದಿಕುಂಟೆ ಅಗ್ರಹಾರ ಕೆರೆಗೆ ಆಕಸ್ಮಿಕವಾಗಿ ಬಿದ್ದಿದ್ದ ಸಹೋದರಿಯರನ್ನು ಅದೇ ರಸ್ತೆಯಲ್ಲಿ ಬಸ್ ಓಡಿಸುತ್ತ ಬಂದಿದ್ದ ಬಸ್ ಚಾಲಕ ಮಂಜುನಾಥ್ ಗಮನಿಸಿ, ಕೆರೆಗೆ  ಹಾರಿ ಬಾಲಕಿಯರಿಬ್ಬರನ್ನು ರಕ್ಷಿಸುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದರು.

ಮಂಜುನಾಥ್ ಅವರ ಮಾನವೀಯ ಗುಣವನ್ನು ಪ್ರಶಂಸಿಸಿ ಜಿಲ್ಲಾಡಳಿತ ವಿಶೇಷ ಸಾಧಕ ಎಂದು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಇಂದು ಸಂಜೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

Share this Article
Verified by MonsterInsights