ತುಮಕೂರು: ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಮಗ ಕೊಂದಿರುವ ಘಟನೆ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ.
ರೇಣುಕಯ್ಯ(65) ಕೊಲೆಯಾದ ದುರ್ದೈವಿ. ಎಲೆ ಮಾರಾಟ ಮಾಡಿದ ಹಣ ವಿಚಾರಕ್ಕೆ ರೇಣುಕಯ್ಯ ಮತ್ತು ಮಗ ರಮೇಶ್ (31) ನಡುವೆ ಭಾನುವಾರ ತಡರಾತ್ರಿ ಗಲಾಟೆ ನಡೆದಿದೆ.ಎಲೆ ಮಾರಾಟದಿಂದ ಬಂದ ಒಂದೂವರೆ ಸಾವಿರ ಹಣವನ್ನು ಕೊಡುವಂತೆ ರೇಣುಕಯ್ಯ ಕೇಳಿದ್ದಾರೆ. ಆದರೆ ಮಗ ರಮೇಶ್ ಕೊಡಲು ಒಪ್ಪದಿದ್ದಾಗ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು,
ಗಲಾಟೆ ತೀವ್ರತೆ ಪಡೆದು ರಮೇಶ್ ಮಚ್ಚಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದು ತೀವ್ರ ರಕ್ತಸ್ರಾವದಿಂದ ರೇಣುಕಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಗುಬ್ಬಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಆರೋಪಿ ರಮೇಶ್‌ನನ್ನ ಬಂಧಿಸಿದ್ದಾರೆ.