ಮಹಿಳಾ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಗೆ ಲೈಂಗಿಕ ಕಿರುಕುಳ

ಡೆಸ್ಕ್
1 Min Read

ತುಮಕೂರು: ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಬಂದೋಬಸ್ತ್ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಬ್ ಇನ್ ಸ್ಪೆಕ್ಟರ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮಹಿಳಾ ಠಾಣೆಯಲ್ಲಿ ದಾಖಲಾಗಿದೆ.

ಹಿಂದೂ ಮಹಾಗಣಪತಿ ವಿಸರ್ಜನೆ ಸಂದರ್ಭದಲ್ಲಿ ಎಂ.ಜಿ.ರಸ್ತೆಯ ಮಹಾದೇವ ಸ್ಟೇಷನರಿ ಅಂಗಡಿ ಮುಂಭಾಗ ಹೋಗುತ್ತಿದ್ದ ಡಿಜೆ ವಾಹನದ ಬಳಿ ಬಂದೋಬಸ್ತ್ ನಲ್ಲಿದ್ದ ಮಹಿಳಾ ಸಬ್ ಇನ್ ಸ್ಪೆಕ್ಟರ್ ಅವರ ಎದೆಗೆ ಹನುಮಂತಪುರದ ದರ್ಶನ್ ಎಂಬಾತ ಏಕಾಏಕಿ ಕೈ ಹಾಕಿ ಎಳೆದಾಡಿದ್ದಾನೆ ಎಂದು ದೂರು ದಾಖಲಾಗಿದೆ.

ಸಮವಸ್ತ್ರದಲ್ಲಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೆ ಲೈಂಗಿಕ ಕಿರುಕುಳ ನೀಡಿದ ದರ್ಶನ್ ನನ್ನು ಸಬ್ ಇನ್ ಸ್ಪೆಕ್ಟರ್ ಗ್ರಾಮಾಂತರ ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ್ದು, ಕಿರುಕುಳ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Share this Article
Join Our WhatsApp Group
What do you like about this page?

0 / 400

Verified by MonsterInsights