ತುಮಕೂರು: ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ನಾಲ್ಕು ಬಾರಿ ಹಾಗೂ ಮಾಜಿ ಶಾಸಕ ಶಫೀ ಅಹಮದ್ ಅವರಿಗೆ ಒಂದು ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದ ಜಯಸಿಂಹರಾವ್ ನಿಧನರಾಗಿದ್ದಾರೆ.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಯಸಿಂಹರಾವ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ಮೃದು ಸ್ವಭಾವದ ಜಯಸಿಂಹ ಅವರು ಸಮಾಜವಾದದ ಪ್ರತಿಪಾದಕರಾಗಿದ್ದರೂ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಕಂಡ ಆಪ್ತರು, ಮೃತರೂ ಓರ್ವ ಪುತ್ರ, ಪುತ್ರಿ, ಮಡದಿಯನ್ನು ಅಗಲಿದ್ದಾರೆ.
ಮೃತದೇಹವನ್ನು ಎಸ್ ಐಟಿ ಬಳಿ ಇರುವ ಸ್ವಗೃಹದಲ್ಲಿ ಇಂದು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ನಂತರ ಅಂತಿಮ ಸಂಸ್ಕಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ಪ್ರಜಾಕಹಳೆಗೆ ಮಾಹಿತಿ ದೊರೆತಿದೆ.