ತಿಪಟೂರು: ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಅಳವಡಿಸಿಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪೋಟೋ ಕಿತ್ತೆಸೆದು ಡಿಪೋ ಮ್ಯಾನೇಜರ್ ರವಿಶಂಕರ್ ಗುಂಡಾವರ್ತನೆ ತೋರಿದ್ದಾರೆ ಎಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಪ್ರಜಾಪ್ರಭುತ್ವ ದಿನ ಆಚರಿಸಿ ಸಂವಿಧಾನ ಪೀಠಿಕೆಯನ್ನ ಓದುವ ಜೊತೆಗೆ ಸಂವಿಧಾನದ ಪೀಠಿಕೆ ಹಾಗೂ ಸಂವಿಧಾನ ಶಿಲ್ಪ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಗೌರವ ಸೂಚಿಸಲಾಗಿದೆ ಆದರೆ ತಿಪಟೂರು ಡಿಪೋ ಮ್ಯಾನೇಜರ್ ಕೆ.ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಹಾಗೂ ಡಿಪೋದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸದೆ ಅವಮಾನ ವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಚಾರ ತಿಳಿದ ತಕ್ಷಣ ಡಿಪೋ ಬಳಿ ಜಮಾಯಿಸಿದ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು, ಸುಮಾರು 2 ಗಂಟೆಗಳ ಕಾಲ ಕಾಯಿಸಿದ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಿ ಹಾರಿಕೆ ಉತ್ತರ ನೀಡಲು ಮುಂದಾದಾಗ ಡಿಪೋ ಮ್ಯಾನೇಜರ್ ಹಾಗೂ ಅಂಬೇಡ್ಕರ್ ವಿರೋಧಿ ವರ್ತನೆ ವಿರುದ್ದ ಧಿಕ್ಕಾರ ಕೂಗಿದರು.
ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ದಲಿತ ಮುಖಂಡ ಕೊಪ್ಪ ಶಾಂತಪ್ಪ ಸರ್ಕಾರ ಕೂಡಲೇ ತಿಪಟೂರು ಡಿಪೋ ಮ್ಯಾನೇಜರ್ ಆರ್ ಎಲ್ ರವಿಶಂಕರ್ ಅಮಾನತ್ತುಗೊಳ್ಳಿಸಿ ತನಿಖೆ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ತಾಲ್ಲೋಕು ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ , ಮಾದಿಗ ದಂಡೋರ ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ.ಗಾಂಧಿನಗರ ಬಸವರಾಜು.ಮತ್ತಿಘಟ್ಟ ಶಿವಕುಮಾರ್.ಶೆಟ್ಟಿಹಳ್ಳಿ ಕಲ್ಲೇಶ್ .ಟಿ.ಕೆ ಶಿವಕುಮಾರ್.ಭೈರಾಪುರ ಮೋಹನ್ ಶೇಖರಯ್ಯ.ಮಂಜುನಾಥ್ ಮುಂತ್ತಾದವರು ಉಪಸ್ಥಿತರಿದರು