ತುಮಕೂರು: ಕೆಎಸ್ಆರ್ ಟಿಸಿ ಬಸ್ ಗಳ ನಡುವೆ ಸಿಲುಕಿ ಶ್ರೀರಂಗಪಟ್ಟಣದ ಮಹಿಳೆಯರಿಬ್ಬರು ಸಾವನ್ನಪ್ಪಿರುವ ಪ್ರಕರಣ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದ ಆರು ಮಹಿಳೆಯರ ತಂಡ ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲ ದರ್ಶನಕ್ಕಾಗಿ ತುಮಕೂರಿಗೆ ಆಗಮಿಸಿದ್ದರು.
ಬೆಳಿಗ್ಗೆ 6.30ಕ್ಕೆ ಶ್ರೀರಂಗಪಟ್ಟಣದಿಂದ ಹೊರಟ ಬಸ್ ತುಮಕೂರು ನಗರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದು, ಬಸ್ ಇಳಿದ ಮಹಿಳೆಯರು, ಗೊರವನಹಳ್ಳಿಗೆ ಹೋಗುವ ಬಸ್ ಹತ್ತಲು ಮುಂದಾಗಿದ್ದಾರೆ.
ಈ ವೇಳೆ ಗೌರಿಬಿದನೂರಿನಿಂದ ಬಂದ ಬಸ್ ಹಿಮ್ಮುಖವಾಗಿ ನಿಲ್ಲಿಸಲು ಮುಂದಾಗಿದ್ದು,ಈ ಎರಡು ಬಸ್ ಗಳ ನಡುವೆ ಸಿಲುಕಿದ ಪುಟ್ಟತಾಯಮ್ಮ(60) ಹಾಗೂ ಪಂಕಜ(55) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಕೆ.ಎಸ್.ಆರ್.ಆರ್.ಟಿ.ಸಿ ಅಧಿಕಾರಿಗಳು ಭೇಟಿ ನೀಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ