ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಎಂಜಿನಿಯರ್

ಡೆಸ್ಕ್
1 Min Read
Crime

ತುಮಕೂರುಹೆಂಡತಿಯ ಕಿರುಕುಳದಿಂದ ಬೇಸತ್ತು ಮೆಟ್ರೋ ಎಂಜನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಕೆ.ಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದ ಮಂಜುನಾಥ್(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ, ಬೆಂಗಳೂರಿನ ಮೆಟ್ರೋದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರಿಯಾಂಕ ಅವರ ಜತೆ ಮದುವೆಯಾಗಿತ್ತು.

ಮಂಜುನಾಥ್‌ ಬೆಂಗಳೂರಿನ ನಮ್ಮ ಮೆಟ್ರೋ (ಬಿಎಂಆರ್ ಸಿಎಲ್)ದಲ್ಲಿ ಎಂಜಿನಿಯರ್, ಮದುವೆಯಾದ ಬಳಿಕ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದಳು, ʻʻನೀನು ಹಳ್ಳಿ ಗುಗ್ಗು, ನಿನ್ನನ್ನ ಮದುವೆಯಾಗಲು ನನಗೆ ಇಷ್ಟ ಇರಲಿಲ್ಲʼʼ ಎಂದು ಪದೇಪದೆ ಕಿಚಾಯಿಸುತ್ತಿದ್ದಳಂತೆ ಪ್ರಿಯಾಂಕ. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇಪದೆ ಗಲಾಟೆ ಆಗುತ್ತಿತ್ತು ಎನ್ನಲಾಗಿದೆ.

ಮಂಜುನಾಥ್‌ ಅವರು ಆತ್ಮಹತ್ಯೆಯ ಮುನ್ನ ತನ್ನ ಸಹೋದರನಿಗೆ ಆಡಿಯೊ ಮೆಸೇಜ್‌ ಕಳುಹಿಸಿದ್ದು, ನನಗೆ ಅವಳ ಜೊತೆ ಜೀವನ ಮಾಡೋಕೆ ಆಗ್ತಿಲ್ಲ. ಆ ಮನೆ ಹಾಳಿಯಿಂದ ನಾನು ಸಾಯುತ್ತಿದ್ದೇನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್ ಆಡಿಯೋ ಮೇಸೆಜ್ ಮಾಡಿದ್ದಾರೆ. ಇದೆಲ್ಲದರ ಆಧಾರದ ಮೇಲೆ ಪತ್ನಿ ಪ್ರಿಯಾಂಕ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Share this Article
Verified by MonsterInsights