ತುಮಕೂರು: ರಾಷ್ಟ್ರಧ್ವಜವನ್ನು ರಾತ್ರಿ ಎಲ್ಲ ಗ್ರಾ.ಪಂ. ಕಟ್ಟಡದಿಂದ ಕೆಳಗೆ ಇಳಿಸದೇ ಅವಮಾನಿಸಿರುವ ಘಟನೆ ತುಮಕೂರು ತಾಲ್ಲೂಕಿನ ನೆಲಹಾಳ್ ಗ್ರಾ.ಪಂನಲ್ಲಿ ನಡೆದಿದೆ.
ನೆಲಹಾಳ್ ಗ್ರಾ.ಪಂ.ಮುಂಭಾಗ ಬೆಳಿಗ್ಗೆ ಯಾದರೂ ರಾಷ್ಟ್ರಧ್ವಜವನ್ನು ಕೆಳಗಿಳಿಸದೇ ಗ್ರಾ.ಪಂ.ಸಿಬ್ಬಂದಿಗಳು ಉದ್ಧಟತನ ಪ್ರದರ್ಶಿಸಿದ್ದಾರೆ. ನಿಯಮದ ಪ್ರಕಾರ ಕಚೇರಿ ಪ್ರಾರಂಭವಾದಾಗ ರಾಷ್ಟ್ರಧ್ವಜವನ್ನು ಹಾರಿಸಿ ಸಂಜೆ ಕೆಳಗೆ ಇಳಿಸಬೇಕಿದೆ.
ಆದರೆ ನೆಲಹಾಳ್ ಗ್ರಾ.ಪಂ.ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿನ್ನೆ ರಾಷ್ಟ್ರಧ್ವಜವನ್ನು ಕೆಳಗೆ ಇಳಿಸಿಲ್ಲ, ಇಂದು ಮುಂಜಾನೆ ಸಾರ್ವಜನಿಕರು ಗ್ರಾ.ಪಂ. ಮೇಲೆ ರಾಷ್ಟ್ರಧ್ವಜ ಹಾರಾಡುತ್ತಿರುವುದನ್ನು ಗಮನಿಸಿದ್ದಾರೆ.