ಚಿಕ್ಕನಾಯಕನಹಳ್ಳಿ: ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ತಿಮ್ಮನಹಳ್ಳಿಯಲ್ಲಿ ನಡೆದಿದೆ. ಈಜು ಬಾರದೆ ಈ ಘಟನೆ ನಡೆದಿದೆ.
ಮೃತರನ್ನು 14 ವರ್ಷದ ರಾಕೇಶ್ ಮತ್ತು 15 ವರ್ಷದ ಧನುಷ್ ಎಂದು ಗುರುತಿಸಲಾಗಿದೆ. ಮೃತ ಬಾಲಕರು ತಿಮ್ಮನಹಳ್ಳಿಯವರು ಎಂದು ಗುರುತಿಸಲಾಗಿದೆ.
ಕೆರೆಯಿಂದ ಇಬ್ಬರು ಬಾಲಕರ ಮೃತ ದೇಹಗಳನ್ನು ಹೊರ ತೆಗೆಯಲಾಗಿದ್ದು ಮೃತರ ಕುಟುಂಬದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.