ಹಸಿದು ಶಾಲೆಗೆ ಹೋದ್ರೆ ಬಿಸಿ ಹಾಲು ಕೊಡ್ತಾರೆ

ಡೆಸ್ಕ್
2 Min Read

ಮಧುಗಿರಿ : ತಂದೆ ತಾಯಿ ಹೊಲಕ್ಕೆ ಹೋದಾಗ ಮನೆಯಲ್ಲಿ ಊಟ ಮಾಡದೆ ಶಾಲೆಗೆ ಹೋದಾಗ ಶಾಲೆಯಲ್ಲಿ ಬಿಸಿ ಹಾಲು ಕೊಡ್ತಾರೆ ಅದೇ ನಮ್ಮ ಹೊಟ್ಟೆ ತುಂಬಿಸುತ್ತೆ ಎನ್ನುತ್ತಾರೆ 5ನೇ ತರಗತಿ ವಿದ್ಯಾರ್ಥಿನಿ ವಿದ್ಯಾಶ್ರೀ.

ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕೆ ಎಂ ಎಫ್ ವತಿಯಿಂದ ಆಯೋಜಿಸಿದ್ದ ಕ್ಷೀರಾಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕ ವಾಗಿ ಹಾಲು ವಿತರಣೆಯಲ್ಲಿ ಭಾಗವಹಿಸಿ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾಶ್ರೀ ಹಾಲು ಅಮೃತ ಸಮಾನ ಮಕ್ಕಳು ದೇವರ ಸಮಾನ ಅದಕ್ಕೆ ಮುಖ್ಯಮಂತ್ರಿಗಳು ಮಕ್ಕಳಿಗೆ ಹಾಲು ನೀಡುತ್ತಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ರಾಜ್ಯದ ಮಕ್ಕಳಿಗೆ ಕ್ಷೀರ ಭಾಗ್ಯ  ಯೋಜನೆಯನ್ನು ಜಾರಿಗೊಳಿಸಿದ ನಮ್ಮ ತಂದೆಯ ಸಮಾನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಧನ್ಯವಾದಗಳು  ಇಂತಹ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳೊಂದಿಗೆ ವೇದಿಕೆ ಹಂಚಿ ಕೊಂಡು ಹಾಲು ನೀಡಿದ್ದು ಖುಷಿ ತಂದಿದೆ.   ಸರ್ಕಾರಿ ಶಾಲಾ ಮಕ್ಕಳಿಗೆ  ಷೂ ಭಾಗ್ಯ ಜಾರಿ ಮಾಡಲು ಕಾರಣರಾದ ನಮ್ಮ ಸಹಕಾರ ಸಚಿವರಾದ ರಾಜಣ್ಣ ನವರಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ಕೊಟ್ಟಿದ್ದಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.

ಕ್ಷೀರಭಾಗ್ಯದ ಫಲಾನುಭವಿಗಳಾದ  ಜಲತಿಮ್ಮನಹಳ್ಳಿ ಗ್ರಾಮದ ಎಲ್ ಪಿ ಎಸ್ ಶಾಲೆಯ ವಿದ್ಯಾರ್ಥಿನಿ ಮಧುಲತಾ ಕೆ.ಎಸ್, ಬೇಡತ್ತೂರು ಹೆಚ್ ಪಿ ಎಸ್ ಶಾಲೆಯ ವಿದ್ಯಾರ್ಥಿ ಪುನೀತ್, ಮರಿತಿಮ್ಮನಹಳ್ಳಿಯ ಹೆಚ್ ಪಿ ಎಸ್ ಶಾಲೆಯ ರಾಜೇಶ್ ಎಂ.ಎಲ್ , ಯಲ್ಕೂರು ಹೆಚ್ ಪಿ ಎಸ್ ಶಾಲೆಯ ಹರ್ಷಿಯಾ , ಚಿಕ್ಕಮಾಲೂರು ಹೆಚ್ ಪಿ ಎಸ್ ಶಾಲೆಯ ವಿಕಾಸ್ , ರೆಡ್ಡಿಹಳ್ಳಿ ಹೆಚ್ ಪಿ ಎಸ್ ಶಾಲೆಯ ಪಲ್ಲವಿ , ಕಾರ್ಪೆನಹಳ್ಳಿ ಹೆಚ್ ಪಿ ಎಸ್ ಶಾಲೆಯ ಪ್ರಣೀತ್ ಕುಮಾರ್ , ಡಿ.ವಿ.ಹಳ್ಳಿ ಹೆಚ್ ಪಿ ಎಸ್ ಶಾಲೆಯ ಹರ್ಷಿತ್ ಗೌಡ , ಬೂದೇನಹಳ್ಳಿಯ ಹೆಚ್ ಪಿ ಎಸ್ ಶಾಲೆಯ ಉಷಾ ಹಾಗೂ ಶಿಕ್ಷಕರು ಇದ್ದರು.

ವೇದಿಕೆಯಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ , ಗೃಹ ಸಚಿವ ಡಾ.ಜಿ.ಪರಮೇಶ್ವರ , ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ , ದೆಹಲಿಯ ವಿಶೇಷ ಪ್ರತಿನಿಧಿ ಟಿ.ಜಿ.ಜಯಚಂದ್ರ , ಶಾಸಕರಾದ ಕೆ. ಷಡಾಕ್ಷರಿ , ರಾಜೇಂದ್ರರಾಜಣ್ಣ , ಡಾ.ರಂಗನಾಥ್ , ಹೆಚ್.ವಿ. ವೆಂಕಟೇಶ್  ಕೆ ಎಂ ಎಫ್ ಅಧ್ಯಕ್ಷ ಎಲ್ .ಬಿ.ಪಿ. ಭೀಮಾನಾಯ್ಕ , ಮಾಜಿ ಶಾಸಕರಾದ ಗಂಗಹನುಮಯ್ಯ , ಹೆಚ್.ನಿಂಗಪ್ಪ , ಕೆ.ಎಸ್. ಕಿರಣ್ ಕುಮಾರ್ ಕೆ.ಎಂ.ಎಫ್ ವ್ಯವ ಸ್ಥಾಪಕ ಎಂ.ಕೆ.ಜಗದೀಶ್ ಸೇರಿದಂತೆ ಇತರರಿದ್ದರು.

 

Share this Article
Verified by MonsterInsights