ಹಾಲು ಉತ್ಪಾದಕರಿಗೆ ಕಾಂಗ್ರೆಸ್‌ ಆರನೇ ಗ್ಯಾರೆಂಟಿ: ಭೀಮಾ ನಾಯ್ಕ್

ಮಧುಗಿರಿ: ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರಲ್ಲಿ ಸಿದ್ದರಾಮಯ್ಯ ಅವರು ಮಾತ್ರ ಹಾಲು ಉತ್ಪಾದಕರಿಗೆ ಬೆಲೆ ಹೆಚ್ಚಳ ಮಾಡಿದ್ದು ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಂಕಷ್ಟದಲ್ಲಿದ್ದ ರಾಜ್ಯದ ಹಾಲು ಉತ್ಪಾದಕರ ಒಕ್ಕೂಟಗಳಿಂದ ಹಾಲು ಖರೀದಿಸುವ ಮೂಲಕ ಹಾಲು ಉತ್ಪಾದಕರ ಹಿತವನ್ನು ಬಯಸಿದ್ದರು ಎಂದರು.

ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಎರಡು ರೂಪಾಯಿ ಅನ್ನು ಐದು ರೂಪಾಯಿಗೆ ಈಗ ಮೂರು ರೂಪಾಯಿಗೆ ಹೆಚ್ಚಿಸುವ ತೀರ್ಮಾನ ಕೈಗೊಳ್ಳುವ ಮೂಲಕ ರೈತರ ಆರ್ಥಿಕತೆ ಹೆಚ್ಚಿಸಲು ಕ್ರಮಕೈಗೊಂಡಿದ್ದರಿಂದ ಕೆಎಂಎಫ್ ಮೊದಲ ಆಡಳಿತ ಸಭೆಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು ಎಂದರು.

ಕಾಂಗ್ರೆಸ್  ಚುನಾವಣೆಗೆ ಮುಂಚೆ  ಐದು ಗ್ಯಾರೆಂಟಿ ನೀಡಿತ್ತು ಆದರೆ ಹಾಲು ಉತ್ಪಾದಕರಿಗೆ 3 ರೂಪಾಯಿ ನೀಡುತ್ತಿರುವುದು ಆರನೇ ಗ್ಯಾರೆಂಟಿ, ರೈತರಿಗೆ ಮೂರು ರೂಪಾಯಿ ಸಿಗಲು ಕಾರಣವಾಗಿರುವ ಸಹಕಾರ ಸಚಿವರ ಕ್ಷೇತ್ರದಲ್ಲಿ ದಶಮಾನೋತ್ಸವ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಹಾಲು ಉತ್ಪಾದಕರಿಗೆ 3 ರೂಪಾಯಿ ಹೆಚ್ಚಳ ಮಾಡಿದ ನಂತರ 4 ಲಕ್ಷ ಲೀಟರ್ ಹೆಚ್ಚಳವಾಗಿದ್ದು, ಪಶು ಆಹಾರ ದರ ಹೆಚ್ಚಳವಾಗಿದ್ದು ಹೈನುಗಾರಿಕೆ ರೈತರಿಗೆ ಹೊರೆಯಾಗಿದ್ದು, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಹಾಲು ಖರೀದಿ ಮತ್ತು ಮಾರಾಟ ದರ ಕಡಿಮೆ ಇದೆ ಎಂದು ಮಾಹಿತಿ ನೀಡಿದರು.

 

Verified by MonsterInsights