ತುಮಕೂರು: ಮನೋರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಝಕನ್ನಡ ವಾಹಿನಿ ಪ್ರತಿಬಾರಿಯೂ ನನ್ನ ವೀಕ್ಷಕರ ನಾಡಿಮಿಡಿತಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತ ಬರುತ್ತಿದ್ದು ತುಮಕೂರಿನ ಜನರಿಗೆ ಡಬಲ್ ಮನೋರಂಜನೆ ನೀಡಲು ಮುಂದಾಗಿದೆ.
ಝೀ ಕನ್ನಡ ವಾಹಿನಿಯ ಮೊದಲ ನಿರ್ಮಾಣದ ಕನಸಿನ ಕೂಸು ಸೀತಾರಾಮ, ಭೂಮಿಗೆ ಬಂದ ಭಗವಂತ ಧಾರಾವಾಹಿಯ ತಂಡ ಇಂದು ಮಧ್ಯಾಹ್ನ 3 ಗಂಟೆಗೆ ತುಮಕೂರಿನ ಹೆಚ್.ಎಂ ಗಂಗಾಧರಯ್ಯ ಮೆಮೋರಿಯಲ್ ಹಾಲ್ ನಲ್ಲಿ ಝೀ ಜಾತ್ರೆ ವರಮಹಾಲಕ್ಷ್ಮೀ ಮಹೋತ್ಸವ ಕಾರ್ಯಕ್ರಮದ ಮುಖಾಂತರ ನಮ್ಮ ಅಭಿಮಾನಿಗಳನ್ನ ನೇರವಾಗಿ ಭೇಟಿಮಾಡಲಿದೆ.
ನಾಳೆ ಝೀ ಕನ್ನಡ ತನ್ನ ಪ್ರತಿಷ್ಟಿತ ಲಿಯಾಲಿಟಿ ಶೋಗಳಲ್ಲಿ ಒಂದಾದ ಲೋಟಾಂಪಿಯನ್ ಫಿನಾಲೆಯನ್ನು ಕೂಡ ಇದೇ ವೇದಿಕೆಯಲ್ಲಿ ದಿನಾಂಕ 21.8,2023ರಂದು ನಡೆಸಲು ನಿರ್ಧರಿಸಿದ್ದು ತುಮಕೂರಿನ ಜನತೆಗೆ ಡಬಲ್ ಎಂಟರ್ಟೈನ್ ಮೆಂಟ್ ಗ್ಯಾರಂಟಿ ಸಿಗಲಿದೆ.