ಲಾಲ್ ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ ಇಂದಿನಿಂದ ಆರಂಭವಾಗಿದೆ

ಡೆಸ್ಕ್
1 Min Read

ಬೆಂಗಳೂರುಸ್ವಾತಂತ್ರ್ಯೋತ್ಸವದ ನಿಮಿತ್ತ ಇಂದಿನಿಂದ ಲಾಲ್ ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ತೋಟಗಾರಿಕಾ ಇಲಾಖೆಯಿಂದ ಆಯೋಜನೆಯಾಗಿರುವ ಹನ್ನೆರಡು ದಿನಗಳ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಸುಮಾರು ಎಂಟರಿಂದ ಹತ್ತು ಲಕ್ಷ ಜನರ ಆಗಮನದ ನಿರೀಕ್ಷೆಯಿದ್ದು, ಸಂಚಾರ ದಟ್ಟಣೆಯಾಗದಂತೆ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.

ವಾಹನಗಳ ನಿಲುಗಡೆಗೆ ಅವಕಾಶ, ಮತ್ತು ನಿಷೇಧದ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ವಾಹನ ನಿಲುಗಡೆಗೆ ಅವಕಾಶವಿರುವ ಸ್ಥಳಗಳುಡಾ.ಮರೀಗೌಡ ರಸ್ತೆಯ ಅಲ್ ಅಮೀನ್ ಕಾಲೇಜು ಅವರಣದಲ್ಲಿ ದ್ವಿಚಕ್ರ ವಾಹನಗಳಿಗೆ, ಕೆ.ಹೆಚ್ ರಸ್ತೆಯ ಶಾಂತಿನಗರ ಬಸ್ ನಿಲ್ದಾಣದ ಪಾರ್ಕಿಂಗ್​ನಲ್ಲಿ ನಾಲ್ಕು ಚಕ್ರದ ವಾಹನಗಳು, ಮರಿಗೌಡ ರಸ್ತೆಯ ಹಾಪ್ ಕಾಮ್ಸ್​ನಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ, ಜೆಸಿ ರಸ್ತೆ, ಕಾರ್ಪೊರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ವಾಹನ ನಿಲುಗಡೆಗೆ ನಿಷೇಧ ಸ್ಥಳಮರಿಗೌಡ ರಸ್ತೆಯ ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮಾನ್ಸ್​ವರೆಗೆ ಎರಡು ರಸ್ತೆ ಬದಿ, ಕೆ ಎಚ್ ರಸ್ತೆಯಿಂದ ಶಾಂತಿ ನಗರ ಬಸ್ ನಿಲ್ದಾಣವರೆಗೆ, ಸಿದ್ಧಯ್ಯ ರಸ್ತೆಯ ಊರ್ವಶಿ ಥೀಯೇಟರ್ ಜಂಕ್ಷನ್​ನಿಂದ ವಿಲ್ಸನ್ ಗಾರ್ಡನ್​ವರೆಗೂ, ಅಶೋಕ ಪಿಲ್ಲರ್​ನಿಂದ ಸಿದ್ದಾಪುರ ಜಂಕ್ಷನ್​ವರೆಗೂ, ಆರ್ ವಿ ಟೀಚರ್ಸ್ ಕಾಲೇಜ್​ನಿಂದ ಆಶೋಕ್ ಪಿಲ್ಲರ್​ವರೆಗೂ ವಾಹನ ನಿಲುಗಡೆಗೆ ಅವಕಾಶವಿಲ್ಲ.

ಮರೀಗೌಡ ರಸ್ತೆ, ಲಾಲ್ ಬಾಗ್ ರಸ್ತೆ, ಕೆ.ಎಚ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಸಾರ್ವಜನಿಕರು ಸಮೂಹ ಸಾರಿಗೆ, ಕ್ಯಾಬ್ ಬಳಸುವಂತೆ ಮತ್ತು ವಾಹನ ನಿಲುಗಡೆಗೆ ಅವಕಾಶ ನೀಡಿರುವುದರ ಸದುಪಯೋಗ ಪಡೆದುಕೊಳ್ಳುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

TAGGED: ,
Share this Article
Join Our WhatsApp Group
What do you like about this page?

0 / 400

Verified by MonsterInsights