ಭಾರತದ ವಿವಾಹಿತ ಮಹಿಳೆಯೊಬ್ಬರು ತಾನು ಫೇಸ್ಬುಕ್ನಲ್ಲಿ ಸ್ನೇಹ ಬೆಳೆಸಿದ ಮತ್ತು ಪ್ರೀತಿಸುತ್ತಿದ್ದ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ತೆರಳಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದ 34 ವರ್ಷದ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾನನ್ನು ಭೇಟಿಯಾಗಲು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಗೆ ತೆರಳಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಸ್ರುಲ್ಲಾ ಮತ್ತು ಅಂಜು ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಸ್ನೇಹಿತರಾಗಿದ್ದರು ಅಂಜು ಆರಂಭದಲ್ಲಿ ಪೊಲೀಸರ ವಶದಲ್ಲಿದ್ದರು ಆದರೆ ಅವರ ಪ್ರಯಾಣ ದಾಖಲೆಗಳನ್ನು ಜಿಲ್ಲಾ ಪೊಲೀಸರು ಪರಿಶೀಲಿಸಿದ ನಂತರ ಬಿಡುಗಡೆ ಮಾಡಿದ್ದಾರೆ. ಎಲ್ಲಾ ಪ್ರಯಾಣದ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದ ನಂತರ ಆಕೆಯ ಭೇಟಿಗೆ ಅನುಮತಿ ನೀಡಲಾಗಿದೆ.
ಜೈಪುರಕ್ಕೆ ಹೋಗುವ ನೆಪದಲ್ಲಿ ಗುರುವಾರ ಮನೆಯಿಂದ ಹೊರ ಹೋಗಿದ್ದಳು ಆದರೆ ಆಕೆ ಪಾಕಿಸ್ತಾನದಲ್ಲಿದ್ದಾಳೆ ಎಂದು ಮನೆಯವರಿಗೆ ನಂತರ ಗೊತ್ತಾಗಿದೆ ಎಂದು ಆಕೆಯ ಪತಿ ಅರವಿಂದ್ ಪೊಲೀಸರಿಗೆ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವಳೊಂದಿಗೆ ವಾಟ್ಸಾಪ್ನಲ್ಲಿ ಮಾತನಾಡಿದಾಗ ಆಕೆ ಲಾಹೋರ್ ನಲ್ಲಿ ಇರುವುದಾಗಿ ತಿಳಿಯಿತು ಎಂದುಅರವಿಂದ್ ಪೊಲೀಸರಿಗೆ ತಿಳಿಸಿದ್ದಾರೆ.
ಅರವಿಂದ್ ಮತ್ತು ಅಂಜು 2007 ರಲ್ಲಿ ವಿವಾಹವಾಗಿದ್ದು, ಅವರಿಗೆ ಅವರಿಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗನಿದ್ದಾರೆ. ಆಕೆ ಸೋಷಿಯಲ್ ಮೀಡಿಯಾದಲ್ಲಿ ಯಾರೊಂದಿಗೂ ಸಂಪರ್ಕದಲ್ಲಿರುತ್ತಾಳೆ ಎಂಬುದೇ ತನಗೆ ತಿಳಿದಿರಲಿಲ್ಲ ಎಂದು ಅರವಿಂದ್ ಹೇಳಿದ್ದಾರೆ.