Kichcha Sudeep: ನಿರ್ಮಾಪಕರಿಂದ ಮೋಸದ ಆರೋಪ, ಕೊನೆಗೂ ಮೌನ ಮುರಿದ ಸುದೀಪ್ ಹೇಳಿದ್ದು ಏನು?

Author3 NewsDesk
1 Min Read
Kichcha Sudeep

ಬೆಂಗಳೂರು: ತಮ್ಮ ವಿರುದ್ದ ನಿರ್ಮಾಪಕ ಎನ್‌.ಕುಮಾರ್ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ನಟ ಸುದೀಪ್‌ ಕೊನೆಗೂ ಮೌನ ಮುರಿದಿದ್ದು, ನನ್ನ ಮೇಲೆ ಒತ್ತಡ ಹಾಕದೆ ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳಿ ಎಂದು ಸುದೀಪ್​ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘಕ್ಕೆ ಸುದೀರ್ಘ ಪತ್ರ ಬರದಿದ್ದಾರೆ.

ಇದೇ ವೇಳೇ ಅವರು ನಿರ್ಮಾಪಕರ ಎಮ್ ಎನ್ ಕುಮಾರ್ ನನ್ನ ಮೇಲೆ ಅರೋಪ ಮಾಡಿದ್ದಾರೆ ನನ್ನ ಮೇಲೆ ಅರೋಪ ಮಾಡಲು ಅವರು ಬಂದಾಗ ನೀವು ಸರಿಯಾದ ದಾಖಲೆಗಳಿವೆಯ ಎಂದು ಪರೀಕ್ಷಿಸ ಮಾಡಬೇಕಿತ್ತು. ಇದಲ್ಲದೇ ಅವರು ಇಂಡಸ್ಟ್ರಿಯಲ್ಲಿ ಸಾಕಷ್ಟು ಮಂದಿ ನನಗೆ ಮೋಸ ಮಾಡಿದ್ದಾರೆ. ದಾಖಲೆಗಳಿಲ್ಲದ ಕಾರಣ ನಾನು ಸುಮ್ಮನೆ ಆಗಿದ್ದೇನೆ. ಇನ್ನೂ ಸುದ್ದಿಗೋಷ್ಠಿಯಲ್ಲಿ ಸುರೇಶ್ ಅವರು ಕುಮಾರ್  ಆತ್ಮಹತ್ಯೆ ಮಾಡಿಕೊಂಡ್ರೆ ನಾನು ಹೊಣೆ ಅಂದಿದ್ದಾರೆ. ಈ ಸುರೇಶ್ ಹೇಳಿಕೆ ಕಾರಣದಿಂದಾಗಿ ನಾನು ನೋಟಿಸ್ ಕಳಿಸಿದ್ದೇನೆ ಹೊರತು ಆಕ್ರೋಶದಿಂದ ಅಲ್ಲ ಅವರು ಹೇಳಿದ್ದಾರೆ.

 

 

 

Share this Article
Verified by MonsterInsights