ತುಮಕೂರು: ತುರುವೇಕೆರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಮಾಹಿತಿಯನ್ನು ಒದಗಿಸಿದ ತುರುವೇಕೆರೆ ತಾ.ಪಂ.ಇಒ ಅವರನ್ನು ಸಚಿವ, ಶಾಸಕರು ತರಾಟೆಗೆ ತೆಗೆದುಕೊಂಡರು.
ಕೆಡಿಪಿ ಸಭೆಗೆ ತಾಲ್ಲೂಕಿನಲ್ಲಿ ಎರಡು ಹಳ್ಳಿಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಆಗಿದೆ ಎಂದು ಸಭೆಗೆ ತಪ್ಪು ಮಾಹಿತಿ ನೀಡಿದ್ದರಿಂದ ಕುಪಿತಗೊಂಡ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಇಒ ಅವರನ್ನು ಹಳ್ಳಿಗೆ ಹೋಗ್ತೀರೇನ್ರಿ ಎಂದು ಪ್ರಶ್ನಿಸಿದರು.
ರೀ ಸರ್ಕಾರ ನಿಮ್ಗೆಲ್ಲ ಜೀಪ್ ಕೊಟ್ಟಿದೆ, ಹಳ್ಳಿಗಳಿಗೆ ಹೋಗ್ರೀ,, ಹಳ್ಳಿ ಜನ ಕುಡಿಯೋಕೆ ನೀರಿಲ್ಲ ಅಂತ ಸಾಯ್ಬೇಕಾ? ನೀನು ಹಳ್ಳಿಗೆ ಹೋಗಲ್ಲ ಆಫೀಸ್ ನಲ್ಲಿ ಕುಂತ್ಕೊಂತೀಯಾ ಎಂದು ತುರುವೇಕೆರೆ ಇಒ ಅವರನ್ನು ಶಾಸಕ ಎಂ.ಟಿ.ಕೃಷ್ಣಪ್ಪ ತರಾಟೆ ತೆಗೆದುಕೊಂಡರು.
ಸಿಇಒ ಗೆ ಒಂದು ಲೆಕ್ಕ, ನಮಗೆ ಒಂದು ಲೆಕ್ಕ ಹೇಳ್ತೀರಾ? ಶಾಸಕರಿಗೆ ಸಮಸ್ಯೆ ಗೊತ್ತಿದೆ, ಶಾಸಕರು ಹೇಳ್ತಾರೆ ಕೇಳಿ? ಕುಡಿಯುವ ನೀರನ್ನು ಎಲ್ಲಿಂದ ಪೂರೈಸುತ್ತಿದ್ದಾರೆ ಹೇಳು? ಗೊಲ್ಲರಹಟ್ಟಿಯಲ್ಲಿ ಹುಟ್ಟಿದ್ದರೆ ನಿನಗೆ ಗೊತ್ತಾಗೋದು,ಕುಡಿಯುವ ನೀರಿಗೆ ಗಲಾಟೆ ಆಗ್ತಿದೆ, ಬೋರ್ ವೆಲ್ ಕೊರೆಸೋಕೆ ಏನ್ರಿ ರೋಗ ಎಂದರು.
ಇಒಗಳಿಗೆ ಮೀಟಿಂಗ್ ನಲ್ಲಿ ಏನು ಹೇಳೋದಿಲ್ಲ, ಊರೊಳಗೆ ಕರ್ಕೊಂಡು ಕಟ್ಟಿಹಾಕಬೇಕು, ಯಾವ ಊರಲ್ಲಿ ನೀರಿಲ್ಲ, ನೀರು ಒದಗಿಸಲು ಕ್ರಮ ಕೈಗೊಂಡಿದ್ದೀರಾ ಹೇಳಿ ಅಂದ್ರೆ ಕಥೆ ಹೇಳ್ತೀರಾ ಎಂದು ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.