ವಿಶ್ವಗುರು ಭಾರತ ಮೋದಿ ಕನಸು: ಸಿದ್ಧಲಿಂಗಶ್ರೀ

ತುಮಕೂರು: ವಿಶ್ವಗುರು ಭಾರತ ಆಗುವ ಕನಸ್ಸನ್ನು ಮೋದಿಜಿ ಕಂಡಿದ್ದಾರೆ. ಅಮೆರಿಕಾದಲ್ಲಿ ದೇಶದ ಪ್ರಧಾನಿಗೆ ಸಿಕ್ಕ ಗೌರವ ಸ್ಮರಣೀಯವಾದದ್ದು ಎಂದು ಸಿದ್ಧಲಿಂಗಶ್ರೀ ಸ್ಮರಿಸಿದರು.

ಅಜಾದಿ ಕಾ ಅಮೃತ ಮಹೋತ್ಸವದ ಕೊಡುಗೆಗಳಲ್ಲಿ ವಂದೇ ಭಾರತ್ ರೈಲು ಒಂದು. ಈ ರೈಲು ತುಮಕೂರು ಮೂಲಕ ಹಾದು ಹೋಗುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ ಹಾಗೂ ವಂದೇಭಾರತ್ ರೈಲನ್ನು ಸ್ವಾಗತಿಸಲು ನಗರದ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಹಿಂದಿನ ಕಾಲದಲ್ಲಿ ರೈಲುಗಳು ನಿಗಧಿತ ಸಮಯದಲ್ಲಿ ಬರುತ್ತಿರಲಿಲ್ಲ, ಆದರೇ ಇಂದು ರೈಲುಗಳು ಯಾವ ನಿಲ್ದಾಣಕ್ಕೆ ಎಸ್ಟು ಗಂಟೆಗೆ ತಲುಪುತ್ತವೆ ಎಂಬುವುದನ್ನು ಆ್ಯಪ್ ಮೂಲಕ ನೋಡಬಹುದಾಗಿದೆ ಎಂದರಲ್ಲದೇ ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣ ಸುರಕ್ಷತೆ ಮತ್ತು ಸುಖಕರವಾಗಿರುತ್ತದೆ,  ಈ ಹಿಂದೆ ರೈಲಿನಲ್ಲಿ ಪ್ರಯಾಣ ಮಾಡಿ ನಿಲ್ದಾಣದಲ್ಲಿ ಸುಸಜ್ಜಿತವಾದ ಮೂಲಭುತ ಸೌಕರ್ಯಗಳು ಇರಲಿಲ್ಲ ಆದರೇ ಈ ಯಾವುದೇ ಸಮಸ್ಯೆಗಳು ರೈಲ್ವೇ ನಿಲ್ದಾಣಗಳಲ್ಲಿ ಇಲ್ಲ ಎಂದರು.

ಜನಪ್ರತಿನಿಧಿಗಳ ಕರೆಗೆ ಒಗೂಟ್ಟು ಜನಪರ ಅಭಿವೃದ್ದಿ ಕೆಲಸಗಳನ್ನು 9 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದೆ. ಮೊದಲು ಭಾರತ ದೇಶ ಹಾವಾಡಿಗರ ದೇಶ ಎನ್ನುವ ಪಟ್ಟವಿತ್ತು ಆದರೇ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಗಳಾದ ಮೇಲೆ ಭಾರತದ ಘನತೆಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ್ದಾರೆ ಎಂದು ನಗರ ಶಾಸಕ ಜ್ಯೋತಿ ಗಣೇಶ್ ಹೇಳಿದರು.

ಭಾರತೀಯ ರೈಲ್ವೇಗಳಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ನರೇಂದ್ರ ಮೋದಿಯವರ 9ವರ್ಷಗಳ ಆಡಳಿತದಲ್ಲಿ ಭಾರತ ದೇಶದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು, ಮೇಕ್‌ಇನ್ ಇಂಡಿಯಾ ಮೂಲಕ ಭಾರತೀಯ ರೈಲ್ವೇ ಇಂಜಿನ್ ಹಾಗೂ ಕೋಚ್‌ಗಳನ್ನೊಳಗೊಂಡಂತೆ ಎಲ್ಲವನ್ನು ನಮ್ಮ ದೇಶದಲ್ಲಿಯೇ ಸಿದ್ದಪಡಿಸಲಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ, ಭಾರತವು ಅಭಿವೃದ್ದಿಯತ್ತ ಸಾಗುತ್ತಿರುವುದರಿಂದ ದೇಶದ ಜಿಡಿಪಿಯೂ ಕೂಡಾ ಏರುತ್ತಿದೆ ಎಂದರು.

ತಮಕೂರು ರೈಲ್ವೇ ನಿಲ್ದಾಣದಕ್ಕೆ ವಂದೇ ಭಾರತ್ ರೈಲು ಆಗಮಿಸುವ ಮುನ್ನ ಸಾರ್ವಜನಿಕರು ಕುತುಹಲಕಾರಿಯಿಂದ ವೀಕ್ಷಿಸಿದರು.

ಸಂಸದ ಜಿ.ಎಸ್. ಬಸವರಾಜು ಮಾಜಿ ಸಚಿವ ಬಿ.ಸಿ.ನಾಗೇಶ್, ಬಿಜೆಪಿ ಜಿಲ್ಲಾಧ್ಯಕ್ಷರಾದ ರವಿ ಹೆಬ್ಬಾಕ ಸೇರಿದಂತೆ, ವಂದೇ ಭಾರತ್ ರೈಲಿನಲ್ಲಿ ತಿಪಟೂರಿನಿಂದ ತುಮಕೂರಿನವರಗೆ ಪ್ರಯಾಣಿಸಿದರು.

ಇದೇ ವೇಳೆ ಶಾಸಕ ಸುರೇಶ್ ಗೌಡ, ನರೇಂದ್ರ ಬಾಬು , ಮೇಯರ್ ಪ್ರಭಾವತಿ ಸುಧಿಶ್ವರ್, ಪಾಲಿಕೆ ಸದಸ್ಯೆ ಗಿರಿಜ ದನಿಯಾಕುಮಾರ್, ರೈಲ್ವೇ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Verified by MonsterInsights