ಸೌತ್ ಇಂಡಿಯನ್ ಸಿನಿಮಾದ ಟಾಪ್ ಹೀರೋಯಿನ್ ಗೋವಾ ಬ್ಯೂಟಿ ಇಲಿಯಾನ ಮದ್ವೆಯಾಗದೇ ಗರ್ಭೀಣಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತಿರೋದೆ. ಗರ್ಭೀಣಿ ಅನ್ನೋದನ್ನ ಇನ್ ಸ್ಟಾದಲ್ಲಿ ಅನೌನ್ಸ್ ಮಾಡಿದ್ದ ಝೀರೋ ಸೈಜ್ ಸುಂದರಿ, ಬೇಬಿ ಬಂಪ್ಸ್ ಪೋಸ್ಟ್ ಗಳನ್ನು ಹೆಚ್ಚಾಗಿ ಪೋಸ್ಟ್ ಮಾಡುತ್ತಿರುವುದು ಇನ್ ಸ್ಟಾ ಪ್ರೇಮಿಗಳಿಗೆ ಗೊತ್ತಿರುವ ವಿಚಾರವೇ ಸರಿ.
ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಇಲಿಯಾನ 2019ರಲ್ಲಿ ಆಸ್ಟ್ರೇಲಿಯಾ ಮೂಲದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿ ಆ ಮೇಲೆ ಬ್ರೇಕ್ ಮಾಡ್ಕೊಂಡು ಪರಸ್ಪರ ದೂರವಾಗಿದ್ದ ವಿಚಾರ ಗುಟ್ಟಾಗಿಲ್ಲ.
ಗರ್ಭೀಣಿಯಾಗಿರುವ ಸಮಯದಲ್ಲಿ ಎಷ್ಟು ಸಂತೋಷವಾಗಿದ್ದರೆ, ಹೊಟ್ಟೆಯಲ್ಲಿ ಮಗು ಅಷ್ಟೇ ಆರೋಗ್ಯವಾಗಿರುತ್ತದೆ ಎನ್ನುವ ಕಾರಣಕ್ಕೆ ಗರ್ಭೀಣಿ ಮಹಿಳೆಯರು ತಮ್ಮ ಗಂಡನ ಜೊತೆ ಸಾಕಷ್ಟು ಸಮಯ ಕಳೆಯುತ್ತಾರೆ, ಆದರೆ ಇಲಿಯಾನ ವಿಚಾರದಲ್ಲಿ ಅದು ಸಾಧ್ಯವಿಲ್ಲ, ಯಾಕಂದ್ರೆ ಆಕೆ ಇನ್ನು ಮದ್ವೆನೇ ಆಗಿಲ್ಲ.
ಡೇಟಿಂಗ್ ಮಾಡಿ ಬ್ರೇಕಪ್ ಮಾಡ್ಕೊಂಡಿದ್ದ ಇಲಿಯಾನ ಸಡನ್ ಆಗಿ ಗರ್ಭೀಣಿ ಅನ್ನೋದನ್ನ ಅನೌನ್ಸ್ ಮಾಡಿ, ಮದ್ವೆ ಆಗದಿದ್ದರು ಸಹ ಮಗುವಿಗಾಗಿ ಯಾವಾಗಲೂ ಸಂತೋಷವಾಗಿರಬೇಕು ಎಂದು ಬಯಸುತ್ತಿದ್ದಾರಂತೆ, ಅದಕ್ಕಾಗಿ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂಟಿಯಾಗಿ ಪ್ರವಾಸ ಮಾಡುತ್ತಿದ್ದಾರಂತೆ ಅನ್ನು ವಿಚಾರ ಹರಿದಾಡುತ್ತಿದೆ.
ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಅವರೇ ಇಲಿಯಾನ ತಾಯಿಯಾಗಲು ಕಾರಣ ಎನ್ನುವ ಹಲ್ ಚಲ್ ಸಿನಿಮಾರಂಗದಲ್ಲಿ ಸುತ್ತುತ್ತಿದೆ, ಸದ್ಯದಲ್ಲಿಯೇ ಇಲಿಯಾನ ಮಗುವಿಗೆ ಜನ್ಮನೀಡಲಿದ್ದಾರೆ ಎನ್ನಲಾಗುತ್ತಿದೆ.