ದಿನಗೂಲಿ ಕಾರ್ಮಿಕ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದು, ಆತನ ಅಕೌಂಟಿಗೆ ಏಕಾಏಕಿ 100 ಕೋಟಿ ಜಮೆ ಆಗಿದ್ದರಿಂದ ಏನು ಮಾಡ್ಬೇಕು ಅನ್ನೋದೇ ಗೊತ್ತಾಗದೇ ತಾಪತ್ರಯಕ್ಕೆ ಸಿಲುಕಿದ್ದಾನೆ.
ಬಂಗಾಳದ ವಾಸುದೇವಪುರ್ ಗೆ ಸೇರಿದ ಮಹ್ಮದ್ ನಸೀರುಲ್ಲಾ, ಜೀವನಕ್ಕಾಗಿ ವ್ಯವಸಾಯ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇತನ ಅಕೌಂಟ್ ಇದೆ, ಸಣ್ಣ ಪುಟ್ಟ ಬ್ಯಾಂಕ್ ವಹಿವಾಟು ನಡೆಸುತ್ತಿದ್ದ.
ಒಂದೇ ಸರಿ ಸಾವಿರ ರೂಪಾಯಿ ಅನ್ನು ಅಕೌಂಟಿಗೆ ಜಮಾ ಮಾಡ, ವಿತ್ ಡ್ರಾ ಮಾಡದ ನಸೀರುಲ್ಲಾ ಅಕೌಂಟಿನಲ್ಲಿ ಕೇವಲ 17 ರೂಪಾಯಿ ಮಾತ್ರ ಬಾಕಿ ಇದ್ದಿದ್ದು ಏಕಾಏಕಿ 100 ಕೋಟಿ ಜಮೆ ಆಗಿರುವುದು ಗಮನಕ್ಕೆ ಬಂದಿದೆ, ಅಕೌಂಟಿಗೆ ದುಡ್ಡು ಬಂದ ತಕ್ಷಣ ಜಂಗೀಪುರ ಸೈಬರ್ ಪೊಲೀಸರು ನೋಟೀಸ್ ನೀಡಿದ್ದಾರೆ.
ಪೊಲೀಸ್ ನೀಡಿದ ನೋಟೀಸ್ ನಿಂದ ತಬ್ಬಿಬ್ಬಾದ ನಸೀರುಲ್ಲಾ, ಅಕೌಂಟಿಗೆ ಹಣ ಬಂದಿದ್ದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದು, ಬ್ಯಾಂಕ್ ಗೆ ಹೋಗಿ ಅಧಿಕಾರಿಗಳಿಗೆ ದೂರು ನೀಡಿದ್ದಾನೆ, ನಸೀರುಲ್ಲಾ ನೀಡಿದ ದೂರಿನ ಮೇರೆಗೆ ಬ್ಯಾಂಕ್ ಅಧಿಕಾರಿಗಳು ಆತನ ಅಕೌಂಟ್ ಅನ್ನು ಬ್ಲಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ.