ಲಕ್ಷ್ಮೀಶ.ಕೆ.ಎಲ್
ಕೊರಟಗೆರೆಯಲ್ಲಿ ನಾಮಪತ್ರ ಸಲ್ಲಿದ ಮೇಲೆ ಆಪರೇಷನ್ ಮಾಡಿರುವ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕರನ್ನು ಕಾಂಗ್ರೆಸ್ ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಬಿಜೆಪಿ ಟಿಕೆಟ್ ವಿಚಾರದಲ್ಲಿ ಮುನಿಸಿಕೊಂಡಿದ್ದ ಮಾಜಿ ಶಾಸಕ, ದಲಿತ ಮುಖಂಡ ಗಂಗಹನುಮಯ್ಯ ಮನೆಗೆ ಭೇಟಿ ನೀಡಿರುವ ಡಾ.ಜಿ.ಪರಮೇಶ್ವರ್ ಅವರು ಮಾತುಕತೆ ನಡೆಸಿದ್ದಾರೆ.
2008ರಲ್ಲಿ ಕೊರಟಗೆರೆಯಿಂದ ಸ್ಪರ್ಧಿಸಿದ್ದ ಗಂಗಹನುಮಯ್ಯ ಅವರು 31 ಸಾವಿರ ಮತಗಳನ್ನು ಪಡೆದಿದ್ದರು, ನಂತರ ನಡೆದ ಎರಡು ಚುನಾವಣೆಗಳಲ್ಲಿ ಟಿಕೆಟ್ ಬೇರೆಯವ್ರಿಗೆ ನೀಡಿದ್ದರು ಸಹ ಪಕ್ಷದಲ್ಲಿಯೇ ಉಳಿದು ಕೆಲಸ ಮಾಡಿದ್ದರು.
2023ರ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಗಂಗಹನುಮಯ್ಯ ಅವರಿಗೆ ಟಿಕೆಟ್ ತಪ್ಪಿಸಿ, ಇತ್ತಿಚೆಗೆ ಪಕ್ಷ ಸೇರಿದ್ದ ಬಿ.ಎಚ್.ಅನಿಲ್ ಕುಮಾರ್ ಅವರಿಗೆ ಮಣೆ ಹಾಕಿದ್ದರಿಂದ ಬೇಸರಗೊಂಡಿದ್ದ ಮಾಜಿ ಶಾಸಕ ಗಂಗಹನುಮಯ್ಯ ಮನೆಗೆ ಭೇಟಿ ನೀಡಿದ ಡಾ.ಜಿ.ಪರಮೇಶ್ವರ್ ಅವರು ಕಾಂಗ್ರೆಸ್ ಸೇರುವಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿ ಮಾಜಿ ಶಾಸಕ ಗಂಗಹನುಮಯ್ಯ ಮನೆಗೆ ದಲಿತ ಮುಖಂಡರಾದ ನರಸೀಯಪ್ಪ, ಡಿ.ಟಿ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ ಭೇಟಿ ನೀಡಿ, ಕಾಂಗ್ರೆಸ್ ಸೇರಲು ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.