ಬಿಜೆಪಿ, ಜೆಡಿಎಸ್ ಗೆ ಠೇವಣಿ ಸಿಗಬಾರದು: ಡಾ.ಜಿ.ಪರಮೇಶ್ವರ್

ಫಲಿತಾಂಶ ಬಿಜೆಪಿ, ಜೆಡಿಎಸ್ ತಿರುಗಿ ನೋಡ್ಕೋಬೇಕ

-ಲಕ್ಷ್ಮೀಶ್

ಕೊರಟಗೆರೆ: ಮಧುಗಿರಿಯಲ್ಲಿ 1989ರಲ್ಲಿ ಚುನಾವಣೆ ಸ್ಪರ್ಧಿಸಿದಾಗ, ನನ್ನ ವಿರುದ್ಧ ನಿಂತ ಆರು ಮಂದಿಗೆ ಠೇವಣಿ ಸಿಕ್ಕಿರಲಿಲ್ಲ, ಈ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಅದೇ ಆಗ್ಬೇಕು ಎಂದು ಡಾ.ಜಿ.ಪರಮೇಶ್ವರ್ ಕರೆ ನೀಡಿದರು.

ನಾಮಪತ್ರ ಸಲ್ಲಿಸುವ ಮುನ್ನ ಬೃಹತ್ ರೋಡ್ ಶೋ ನಡೆಸಿದ ಅವರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ, ಕೊರಟಗೆರೆಯ ಮತದಾರರು ಬಿಜೆಪಿ, ಜೆಡಿ ಎಸ್ ತಿರಸ್ಕರಿಸುವ ಮೂಲಕ ಮತ್ತೆ ನನ್ನ ವಿರುದ್ಧ ನಾಮಪತ್ರ ಹಾಕಲು ಯೋಚನೆ ಮಾಡುವಂತೆ ಮಾಡಬೇಕೆಂದು ಮನವಿ ಮಾಡಿದರು.


ಸರ್ಕಾರದಿಂದ ಅನುದಾನ ತಂದೆ ಅಂದ್ರೆ ಅವ್ರಪ್ಪನ ಮನೆಯಿಂದ ತಂದಿದ್ದಾರಾ? ಎಂದು ಟೀಕಿಸುತ್ತಾರೆ, ಯಾರು ಮನೆಯಿಂದ ಹಣ ತರಲ್ಲ, ನಾನು ತಂದು ಜನರಿಗೆ ಕೊಟ್ಟಿದ್ದೇನೆ, ಅಭಿವೃದ್ಧಿ ಅಂದರೆ ಏನು ಎನ್ನುವುದನ್ನು ತೋರಿಸಿದ್ದೇನೆ ಎಂದರು.

ಕಳೆದ ಬಾರಿ 2500 ಕೋಟಿ ಅನುದಾನ ತಂದಿದ್ದೇನೆ, ಈ ಬಾರಿ ಶಾಸಕನಾದ್ರೆ ಐದು ಸಾವಿರ ಕೋಟಿ ಅನುದಾನ ತರುತ್ತೇನೆ, ಕರ್ನಾಟಕ ತಿರುಗಿ ನೋಡುವಂತೆ ಅನುದಾನ ತಂದು ಅಭಿವೃದ್ಧಿ ಮಾಡಿ, ಮತದಾರರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.


ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಮುಗಿಯುವವರೆಗೆ ಎಚ್ಚರಿಕೆಯಿಂದ ಕಾವಲು ಕಾಯಿರಿ, ವಿರೋಧ ಪಕ್ಷಗಳು ಬೇರೆ ಏನು ಮಾಡ್ದಂತೆ ಕಾಯಬೇಕಿದೆ, ಪ್ರತಿ ಹಳ್ಳಿ, ಬೂತ್ ನಲ್ಲಿ ಲೀಡ್ ಕೊಡ್ಬೇಕು, ಫಲಿತಾಂಶ ಬಂದಾಗ ಜೆಡಿಎಸ್, ಬಿಜೆಪಿಯವ್ರು, ತಿರುಗಿ ನೋಡ್ಕೋಬೇಕು ಎಂದು ಕರೆ ನೀಡಿದರು.

Verified by MonsterInsights