ಮಾನ ಮಾರ್ಯಾದೆ ಎಲ್ಲ ಹೋಯ್ತು ತಪ್ಪಾಯ್ತು
ತುಮಕೂರು: ಜೆಡಿಎಸ್ (JDS) ಅಭ್ಯರ್ಥಿ ಗೋವಿಂದರಾಜು (Govindaraju) ಆಡಿಯೋ ಲೀಕ್ ಮಾಡಿ, ಹಾದಿ ರಂಪ, ಬೀದಿ ರಂಪ ಮಾಡಿದ್ದ ಮುಸ್ಲಿಂ ಮಹಿಳೆ ರೇಷ್ಮಾ ಈಗ ಯೂಟರ್ನ್ ಹೊಡೆದಿದ್ದು, ನನ್ದು ತಪ್ಪಾಯ್ತು ಕ್ಷಮಿಸಿ ಎಂದು ಮೀಡಿಯಾಗಳ ಮುಂದೆ ಹೇಳಿಕೆ ನೀಡಿದ್ದಾಳೆ.
ಭಾನುವಾರ ಟೌನ್ ಹಾಲ್ ಬಳಿ ಮುಸ್ಲಿಂ ಸಮುದಾಯದ ಮಹಿಳೆಯರನ್ನು ಸೇರಿಸಿ ಗೋವಿಂದರಾಜು ವಿರುದ್ಧ ಪ್ರತಿಭಟನ(protest) ಮಾಡಿದ್ದಲ್ಲದೆ, ಗೋವಿಂದರಾಜು ಅವರ ಮನೆ ಮುಂದೆ ಹಾಗೂ ಪತ್ರಿಕಾಗೋಷ್ಠಿಯಲ್ಲಿಯೂ ಗೋವಿಂದರಾಜು ವಿರುದ್ಧ ಹರಿಹಾಯ್ದು ಬದಲಾವಣೆ ಮಾಡುವಂತೆ ಪಟ್ಟು ಹಿಡಿದಿದ್ದಳು.
ಭಾನುವಾರ ತಡರಾತ್ರಿ ದೀಢೀರ್ ಎಂದು ಮೀಡಿಯಾ (Media) ಪ್ರತಿನಿಧಿಗಳ ಮುಂದೆ ಹಾಜರಾದ ರೇಷ್ಮಾ, ಸಿಟ್ಟಿನಲ್ಲಿ ಏನೇನೋ ಮಾಡ್ಬಿಟ್ಟೆ, ನನ್ದು ತಪ್ತಾಯ್ತು, ಮಾನಮಾರ್ಯಾದೆ ಎಲ್ಲ ಹೋಯ್ತು, ಗೋವಿಂದರಾಜು ಅವರ ಮಾರ್ಯಾದೆಯೂ ಹೋಯ್ತು ತಪ್ತಾಯ್ತು ಕ್ಷಮಿಸಿ ಎಂದೆಲ್ಲ ಕೇಳಿದ್ದಾಳೆ.
ಗೋವಿಂದರಾಜು ಪರವಾಗಿ ಕೆಲಸ ಮಾಡ್ಬೇಕು, ಅವ್ರನ್ನ ಗೆಲ್ಲಿಸಬೇಕು ಎಂದೆಲ್ಲ ಹೋರಾಡುತ್ತಿದ್ದೆ, ಫೋನ್ ಮಾಡಿ ಮಾತನಾಡುತ್ತಿದ್ದೆ, ಆಮೇಲೆ ಅವ್ರು ಫೋನ್ ರಿಸೀವ್ ಮಾಡೋದೆ ಬಿಟ್ಟರು, ಅದಕ್ಕೆ ಸಿಟ್ಟು ಬಂದು ಹಿಂಗೆಲ್ಲ ಮಾಡಿದೆ ಅಲ್ಲಾಹು ಮೇಲಾಣೆ ತಪ್ತಾಯ್ತು ಕ್ಷಮಿಸಿ ಎಂದಿದ್ದಾಳೆ.