ಗೌರಿಶಂಕರ್ ಬದಲಿಗೆ ವೇಣುಗೋಪಾಲ್ ಕಣಕ್ಕೆ..?
ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳಾಗಿ ಅಣ್ಣ ತಮ್ಮ ಇಬ್ಬರು ನಾಮಿನೇಷನ್ ಸಲ್ಲಿಸಲಿದ್ದು, ಸುಪ್ರೀಂ ತೀರ್ಮಾನದ ಮೇರೆಗೆ ಅಂತಿಮವಾಗಿ ಕಣದಲ್ಲಿ ಯಾರು ಉಳಿಯಲಿದ್ದಾರೆ ಎನ್ನವುದು ಗೊತ್ತಾಲಿದೆ ಎನ್ನುವ ಮಾಹಿತಿ ದೊರೆತಿದೆ.
ಇಂದಿನಿಂದ ಅಧಿಕೃತವಾಗಿ ಪ್ರಚಾರ ಪ್ರಾರಂಭಿಸಿರುವ ಶಾಸಕ ಗೌರಿಶಂಕರ್ ಅವರು ಈ ಬಗ್ಗೆ ಕಾರ್ಯಕರ್ತರೊಂದಿಗೆ ಮಾತನಾಡಿದ್ದು, ಹೈಕೋರ್ಟ್ ನೀಡಿರುವ ತೀರ್ಪಿನ ಮೇಲ್ಮನವಿ ವಿಚಾರಣೆ ನಡೆಸಲಿರುವ ಸುಪ್ರೀಂ ಆದೇಶದ ಮೇಲೆಯೇ ಎಲ್ಲವೂ ನಿರ್ಧಾರವಾಗಲಿದ್ದು, ನಾನು, ವೇಣುಗೋಪಾಲ್ ಇಬ್ಬರು ನಾಮಪತ್ರ ಸಲ್ಲಿಸಲಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ದೇವರಾಯನದುರ್ಗದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕರ್ತರೊಂದಿಗೆ ಮಾತನಾಡುವಾಗ ಅಣ್ಣ ತಮ್ಮನ ಸ್ಪರ್ಧೆ ಬಗ್ಗೆಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.