ತುಮಕೂರು( TUMAKURU): ನಗರ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ (MLA JOYTHI GANESH) ಅಭ್ಯರ್ಥಿಯಾದರೆ ಬಿಜೆಪಿಗೆ ಮತ ಹಾಕೋದಿಲ್ಲ ಎಂದು ಬಿಜೆಪಿ ಮಹಿಳಾ ಕಾರ್ಯಕರ್ತರಿಗೆ ಮತದಾರ ನೇರವಾಗಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಬಿಜೆಪಿ ಸಾಧನೆಗಳ ಬಗ್ಗೆ ಪ್ರಚಾರ ಮಾಡುತ್ತ ನಗರದ ಮತದಾರನ ಮನೆ ಬಳಿಗೆ ಹೋದ ಮಹಿಳಾ ಕಾರ್ಯಕರ್ತರು ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಮತದಾರನಿಗೆ ತಿಳಿಸಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಹೇಳಿ ಬಿಜೆಪಿಗೆ ಮತಹಾಕುವಂತೆ ಮನವಿ ಮಾಡಿದ್ದಾರೆ.
ಮಹಿಳಾ ಕಾರ್ಯಕರ್ತರ ಮಾತುಗಳನ್ನು ಕೇಳಿದ ಮತದಾರರ ಬಿಜೆಪಿಗೆ ಮತ ಹಾಕೋದಕ್ಕೆ ನನಗೆ ಅಭ್ಯಂತರವಿಲ್ಲ ಆದ್ರೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಜನರಿಗೆ ಸಿಗೋದಿಲ್ಲ, ರೆಸ್ಪಾನ್ಸ್ ಇಲ್ಲ, ಸಿಐಟಿಯು ಕಾಲೇಜಿನಲ್ಲಿ ಓದಿದ 19 ಮಂದಿ ಪಿಎಸ್ ಐ (PSI SCAM) ಪರೀಕ್ಷೆ ಬರೆದು ಹಗರಣದಿಂದ ನೊಂದಿದ್ದಾರೆ, ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ, ಗೃಹ ಸಚಿವರು (HOME MINISTER) ರೆಸ್ಪಾನ್ಸ್ ಮಾಡಲ್ಲ ಎಂದು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ವಿಡಿಯೋ ನೋಡಿ: