ಪಾವಗಡ(PAVAGADA): ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಪಾವಗಡ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು, ಮಾಜಿ ಎಂ.ಪಿ ಜನಾರ್ಧನ ಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2009ರಲ್ಲಿ ತಾನು ಚಿತ್ರದುರ್ಗದ ಎಂ.ಪಿ ಯಾದಾಗ ಕೆರೆಗಳಿಗೆ ನೀರು ಹರಿಸುವ ಯೋಜನೆಯಾದ ಭದ್ರಾ ಮೇಲ್ದಂಡೆ (Upper Bhadra) ಯೋಜನೆಯಲ್ಲಿ ಪಾವಗಡ ತಾಲೂಕಿನ ಹೆಸರೇ ಇರಲಿಲ್ಲ, ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಕಾಂಗ್ರೆಸ್ (congress) ಮತ್ತು ಜೆಡಿಎಸ್ (JDS) ಅಧಿಕಾರ ವಹಿಸಿಕೊಂಡು ಆಡಳಿತ ನಡೆಸಿದ್ದರೂ ಸಹ ತಾಲೂಕು ಏಕೆ ಅಭಿವೃದ್ಧಿ ಹೊಂದಿಲ್ಲ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಎಂದರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದೆಂದು ತಾಲೂಕನ್ನ ಆಳಿದ ಶಾಸಕರು ತಿಳಿದಿದ್ದಾರೆ, ಮೂಲಭೂತ ಸೌಕರ್ಯಗಳೇ ಬೇರೆ ಅಭಿವೃದ್ಧಿಯ ಬೇರೆ ಎಂದರು. ತಾಲೂಕಿನ ಜನರು ಒಮ್ಮೆ ಬಿಜೆಪಿ ಪಕ್ಷಕ್ಕೆ ಅವಕಾಶ ನೀಡಿದರೆ ಅಭಿವೃದ್ಧಿ ಎಂದರೆ ಏನು ಎಂಬುದನ್ನು ಮಾಡಿ ತೋರಿಸುತ್ತೇವೆ ಎಂದರು.
ಹೈಕಮಾಂಡ್ ಒಪ್ಪಿದರೆ ಸ್ಪರ್ಧೆ
ಬಿಜೆಪಿಯು ರಾಷ್ಟ್ರೀಯ ಪಕ್ಷವಾಗಿದ್ದು, ಟಿಕೆಟ್ ಕೊಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದ್ದು, ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ತಾನು ಬಿಜೆಪಿ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಲು ಸಿದ್ಧವೆಂದರು.
ತಾಲೂಕು ಮಟ್ಟದ ಬಿಜೆಪಿ ಪಕ್ಷದಲ್ಲಿ ಯಾವುದೇ ಒಡಕುಗಳಿಲ್ಲವೆಂದು, ಎಲ್ಲರೂ ಪಕ್ಷ ಸಿದ್ಧಾಂತಗಳಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತೇವೆ ಎಂದರು.
ಚಿತ್ರದುರ್ಗದಲ್ಲಿ ತಾನು ಎಂಪಿಯಾಗಿ ಕಾರ್ಯನಿರ್ವಹಿಸಿದಾಗ ಡಿಆರ್ ಡಿ ಓ (DRDO),ಇಸ್ರೋ (ISRO), ಆಟೋಮಿಕ್ ರಿಸರ್ಚ್ ಸೆಂಟರ್, ಇವುಗಳೇ ತಾನು ಚಿತ್ರದುರ್ಗ(Chithradurga)ದಲ್ಲಿ ಮಾಡಿದ ಅಭಿವೃದ್ಧಿಗೆ ನಿದರ್ಶನಗಳೆಂದರು. ತಾಲೂಕಿನ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ರವಿಶಂಕರ್ ನಾಯಕ್, ತಾಲೂಕು ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಶಿವಲಿಂಗಪ್ಪ, ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ ಶೇಖರ್ ಬಾಬು, ಯುವ ಮೋರ್ಜಾ ಅಧ್ಯಕ್ಷರು ಮಧು ಪಾಳೇಗಾರ್, ನವೀನ್ ಕುಮಾರ್, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರು ಬ್ಯಾಡನೂರು ಶಿವ, ತಾಲೂಕು ಓಬಿಸಿ ಮರ್ಜ ಹನುಮಂತರೆಡ್ಡಿ, ಜಿಲ್ಲಾ ಓಬಿಸಿ ಮೋರ್ಚಾ ಕಾರ್ಯದರ್ಶಿ ದುಗ್ಗಿ ವೆಂಕಟೇಶ್, ಜಿಲ್ಲಾ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ರಾಮಾಂಜಿನಪ್ಪ, ಪುರಸಭಾ ನಾಮಿನೇ ಸದಸ್ಯರಾದ ಪ್ರಸನ್ ಕುಮಾರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.