ತುಮಕೂರು: ಜನಮತ ಇಲ್ಲದಿದ್ದರೂ ಅಧಿಕಾರಕ್ಕೆ ಬಂದ ಕೋಮುವಾದಿ ಸರ್ಕಾರ, ನಾಡನ್ನು ಅವನತಿಗೆ ತಳ್ಳಿದ್ದು, ತಿನ್ನುವ ಅನ್ನಕ್ಕೂ ಜಿಎಸ್ಟಿ ಹೇರಿ, ಬೆಲೆ ಏರಿಕೆ ಮಾಡುವುದಲ್ಲದೆ, ಸಮುದಾಯಗಳಲ್ಲಿ ದ್ವೇಷ, ಅಸೂಯೆಗಳನ್ನು ಹುಟ್ಟುಹಾಕಿ ಅಶಾಂತಿ ಉಂಟುಮಾಡಿ ಕೇಕೆ ಹಾಕುವ ಮರ್ಯಾದೆ ಹೀನ ಕೆಲಸ ಮಾಡಿದೆ ಎಂದು ಪ್ರಗತಿಪರ ಚಿಂತಕರು ಆರೋಪಿಸಿದ್ದಾರೆ.
ದ್ವೇಷ ರಾಜಕಾರಣವನ್ನು (politics of hate) ಹಿಮ್ಮೆಟ್ಟಿಸಿ, ಸೌಹಾರ್ದತೆಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತುಮಕೂರು ಜಿಲ್ಲೆಯ ಜನಾಂದೋಲನಗಳು ಮತ್ತು ಪ್ರಜ್ಞಾವಂತರು ಅಭಿಯಾನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಇತ್ತಿಚಿನ ವರ್ಷಗಳಲ್ಲಿ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಿ, ಏಕಾಧಿಪತ್ಯವನ್ನು ಸ್ಥಾಪಿಸುವ ಕಾರ್ಯಯೋಜನೆ (ಅಜೆಂಡಾ) ಜಾರಿಯಲ್ಲಿದೆ. ಸಂವಿಧಾನದ (democracy) ಮೌಲ್ಯಗಳನ್ನು ದುರ್ಬಲಗೊಳಿಸುವ ಬೆಳವಣಿಗೆಗಳು ಆತಂಕಕಾರಿ ಯಾಗಿವೆ. ಉದಾಹರಣೆಗೆ, ತೆರಿಗೆಯಲ್ಲಿ ರಾಜ್ಯದ ಪಾಲು ನೀಡದೆ ವಂಚಿಸಿ, ಸ್ವಾಯತ್ತ ಸಂಸ್ಥಗಳ ನಿಯಂತ್ರಣ, ಸಾಂವಿಧಾನಿಕ ಸಂಸ್ಥೆಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅಧಿಕಾರ ದುರುಪಯೋಗಪಡಿಸಿದ್ದಾರೆ ಎಂದು ದೂರಿದ್ದಾರೆ.
70 ವರ್ಷಗಳಲ್ಲಿ ಕಟ್ಟಿದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ದೇಶದ ಉತ್ಪಾದನೆ ಸಂಪೂರ್ಣವಾಗಿ ಕುಸಿದಿದೆ. ಹಣದುಬ್ಬರ ಮತ್ತು ರೂಪಾಯಿ (Currency)ಅಪಮೌಲ್ಯ ಹಾಗೂ ವಿದೇಶಿ ಸಾಲ ವಿಪರೀತವಾಗಿದೆ. 53 ಲಕ್ಷ ಕೋಟಿಗಳಷ್ಟಿದ್ದ ವಿದೇಶಿ ಸಾಲ ಏಳೆಂಟು ವರ್ಷಗಳಲ್ಲಿ 153 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.
ಬಹುಸಂಖ್ಯಾತ ಜನಸಮುದಾಯಗಳ ಆಹಾರ, ಉಡುಪು, ಭಾಷೆ ಮತ್ತು ದೇವರುಗಳನ್ನು ಅಪಮಾನಿಸಲಾಗುತ್ತಿದೆ. ಸುಪ್ರೀಂಕೋರ್ಟ್ (supreme court) ಎಚ್ಚರಿಕೆಯನ್ನು ಧಿಕ್ಕರಿಸಿ ದ್ವೇ಼ಷ ಭಾ಼ಣಗಳಿಗೆ ಪ್ರಚೋದನೆ ಕೊಡಲಾಗುತ್ತಿದೆ. ಆಗ ಯಾರು ಯಾರನ್ನು ಬೇಕಾದರೂ ಪ್ರೀತಿಸುವ ವಾತಾವರಣವಿತ್ತು. ಈ ರೀತಿಯ ನಮ್ಮ ಬಹುತ್ವದ ಸಹಬಾಳ್ವೆಯ ಬದುಕಿಗೆ ಹುಳಿ ಹಿಂಡಿತ್ತಿರುವವರು ಯಾರು?
ಈ ಬಿಕ್ಕಟ್ಟುಗಳಿಂದ ಪಾರಾಗಲು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಸೈದ್ಧಾಂತಿಕ ಹೋರಾಟದಲ್ಲಿ ಎಲ್ಲಾ ಪ್ರಜಾತಾಂತ್ರಿಕ ಪಕ್ಷಗಳೂ, ಜನಾಂದೋಲನಗಳೂ ಕೈ ಜೋಡಿಸುವ ತುರ್ತು ಅಗತ್ಯವಿದೆ. ಈ ಅಭಿಯಾನಕ್ಕೆ ಚಿಂತಕರಾದ ದೊರೈರಾಜು, ಕೆ.ಪಿ.ನಟರಾಜು ಬೂದಾಳು, ಮಾರುತಿಪ್ರಸಾದ್, ಡಾ.ರಂಗಸ್ವಾಮಿ, ನಟರಾಜಪ್ಪ, ಬಾ.ಹ.ರಮಾಕುಮಾರಿ, ಜಿ.ವಿ.ಆನಂದಕುಮಾರ್, ಪಂಡಿತ್ ಜವಹರ್, ಡಾ.ಮುರುಳೀಧರ್, ಕೆ.ಪಿ.ನಟರಾಜು,ನರಸೀಯಪ್ಪ, ಕೆಂಚಮಾರಯ್ಯ, ಮ.ಲ.ನ.ಮೂರ್ತಿ, ನಟರಾಜ ಹೊನ್ನವಳ್ಳಿ, ಅಣೆಕಟ್ಟೆ ವಿಶ್ವನಾಥ್, ಪ್ರೊ.ಎಲ್.ಎನ್.ಮುಕುಂದರಾಜ್, ಸಿ.ಕೆ.ಉಮಾಪತಿ, ಕುಂದೂರು ತಿಮ್ಮಯ್ಯ, ತುಂಬಾಡಿ ರಾಮಯ್ಯ ಸೇರಿದಂತೆ ಜಿಲ್ಲೆಯ ಪ್ರಖ್ಯಾತ ಸಾಹಿತಿಗಳು, ಕಲಾವಿದರು, ವೈದ್ಯರು, ವಕೀಲರು, ರೈತ-ದಲಿತ-ಮಹಿಳಾ ಚಳುವಳಿಗಳ ನಾಯಕರು ಬೆಂಬಲ ಸೂಚಿಸಿದ್ದು ಜಿಲ್ಲೆಯ ವಿದ್ಯಾರ್ಥಿ ಮತ್ತುಯುವ ತಂಡಗಳ ನೇತೃತ್ವದಲಿ ್ಲಅಭಿಯಾನದ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.