ಶಾಸಕ ಸ್ಥಾನದಿಂದ ಗೌರಿಶಂಕರ್ ಅನರ್ಹ: ಹೈಕೋರ್ಟ್ ತೀರ್ಪು

ಡೆಸ್ಕ್
1 Min Read

ತುಮಕೂರು: ಶಾಲಾ ಮಕ್ಕಳಿಗೆ ಚುನಾವಣೆ ವೇಳೆ ನಕಲಿ ಆರೋಗ್ಯ ವಿಮಾ ಬಾಂಡ್ ಹಂಚಿ ಚುನಾವಣಾ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿದಂತೆ ನ್ಯಾಯಾಲಯ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಅನರ್ಹಗೊಳಿಸಿದೆ.

ಮಾಜಿ ಶಾಸಕ ಸುರೇಶ್ ಗೌಡ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಡಿ.ಸಿ.ಗೌರಿಶಂಕರ್ ಅವರು ಇನ್ನು ಆರು ವರ್ಷಗಳ ಕಾಲ ಚುನಾವಣೆಯನ್ನು ಎದುರಿಸುವಂತಿಲ್ಲ.

ಪ್ರಕರಣ ಏನು: 2018ರ ವಿಧಾನಸಭಾ ಚುನಾವಣೆಯಲ್ಲಿ 16 ಸಾವಿರ ಶಾಲಾ ಮಕ್ಕಳಿಗೆ ಡಿ.ಸಿ.ಗೌರಿಶಂಕರ್ ಕುಟುಂಬದ ಒಡೆತನದ ಕಮ್ಮಗೊಂಡನಹಳ್ಳಿ ಆಂಜನೇಯಸ್ವಾಮಿ ಸೇವಾಟ್ರಸ್ಟ್ ನಿಂದ ಆರೋಗ್ಯ ವಿಮೆಯನ್ನು ನೀಡಿತ್ತು, ಸದರಿ ವಿಮೆಗಳು ನಕಲಿ ಆಗಿದ್ದ ಬಗ್ಗೆ ನ್ಯೂ ಲೈಫ್ ಇನ್ಶೂರೆನ್ಸ್ ಕಂಪೆನಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು.

ಫೆ.19ರಂದು ಪ್ರಜಾಕಹಳೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿ

ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದಲೇ ಡಿ.ಸಿ.ಗೌರಿಶಂಕರ್ ಅವರ ಕುಟುಂಬ ನಕಲಿ ವಿಮೆ ಹಂಚಿಕೆ ಮಾಡುವ ಮೂಲಕ ಚುನಾವಣಾ ಅಕ್ರಮ ಎಸಗಿದ್ದ ಬಗ್ಗೆ 2018ರಲ್ಲಿ ಮಾಜಿ ಶಾಸಕ ಬಿ.ಸುರೇಶ್ ಗೌಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಚುನಾವಣೆ ಹೊಸ್ತಿಲ್ಲಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.

Share this Article
Verified by MonsterInsights