ತುಮಕೂರು: ಜೆಡಿಎಸ್ ತಾಲ್ಲೂಕು ಅಧ್ಯಕ್ಷ, ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಪ್ಪ ಜೆಡಿಎಸ್ ತೊರೆದು ಇಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಕಡೆಗೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶೀರ್ಪಿಕೆಯಡಿ ಜ. 05ರಂದು ಪ್ರಜಾಕಹಳೆ ವರದಿಯನ್ನು ಪ್ರಕಟಿಸಿತ್ತು, ಶೀಘ್ರದಲ್ಲಿಯೇ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ರಾಜಕೀಯ ವಿಶ್ಲೇಷಣೆ ಮಾಡಿತ್ತು, ಅದರಂತೆ ಈಗ ರಾಮಚಂದ್ರಪ್ಪ ಅವರು ಜೆಡಿಎಸ್ ತೊರೆದಿದ್ದಾರೆ.
ಇದನ್ನೂ ಓದಿ:
ಬಿಜೆಪಿ ಕಡೆಗೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ..?
ಪಂಚರತ್ನ ಯಾತ್ರೆಯಿಂದಲೇ ಜೆಡಿಎಸ್ ನಿಂದ ದೂರ ಉಳಿದಿದ್ದ ರಾಮಚಂದ್ರಪ್ಪ ಅವರು ಶಾಸಕ ಗೌರಿಶಂಕರ್ ನಡೆಯಿಂದ ಬೇಸರಗೊಂಡು ಮಾಜಿ ಶಾಸಕ ಸುರೇಶ್ ಗೌಡ ಅವರ ನೇತೃತ್ವದಲ್ಲಿ ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ.
ಬಿಜೆಪಿಯಿಂದಲೇ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದ ರಾಮಚಂದ್ರಪ್ಪ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಸೇರ್ಪಡೆಯಾಗಿ ತಾಲ್ಲೂಕು ಘಟಕದ ಎರಡು ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಶಾಸಕ ಗೌರಿಶಂಕರ್ ಅವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಜೆಡಿಎಸ್ ನ ಅನೇಕ ಮುಖಂಡರು ಇತ್ತಿಚೆಗೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು, ಈಗ ಹೊನ್ನುಡಿಕೆಯ ಪ್ರಭಾವಿ ಮುಖಂಡ ರಾಮಚಂದ್ರಪ್ಪ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.