ಪೌರಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖ: ಎಂ.ಬಿ.ನಂದೀಶ್

ತುಮಕೂರು:ಕಳೆದ 42 ವರ್ಷಗಳಿಂದ ಪೌರಕಾರ್ಮಿಕನಾಗಿ ದುಡಿದು,ವಯೋ ನಿವೃತ್ತಿ ಹೊಂದಿದ ಗಂಗಾರಾಮಯ್ಯ ಅವರನ್ನು ಎಸ್.ಐ.ಟಿ.ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿವತಿಯಿಂದ ಗಂಗರಾಮಯ್ಯ ದಂಪತಿಗಳನ್ನು ಆತ್ಮೀಯ ವಾಗಿ ಅಭಿನಂದಿಸಿ ಬೀಳ್ಕೋಡಲಾಯಿತು.

ನಲವತ್ತೇರಡು ವರ್ಷಗಳಿಂದ ಪೌರಕಾರ್ಮಿಕರಿಗಾಗಿ,ಧಪೇದಾರ್ ಆಗಿ,ಸೂಪರ್ ವೈಸರ್ ಆಗಿ ಕೆಲಸ ಮಾಡಿದ್ದ ಗಂಗರಾಮಯ್ಯ ಅವರನ್ನು ವಾಸವಿ ವಿದ್ಯಾಸಂಸ್ಥೆಯ ಮುಂಭಾಗದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ನಂದೀಶ್ ಗಂಗಾರಾಮಯ್ಯ ದಂಪತಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ನಗರದ ಸ್ವಚ್ಛತೆ ಮತ್ತು ಅಭಿವೃದ್ಧಿಯಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾದುದು.ಹಾಗಾಗಿಯೇ ಪ್ರಧಾನಿ ನರೇಂದ್ರಮೋದಿ ಅವರು ಗಣರಾಜ್ಯೋತ್ಸವ ದಿನದಂದು ಪೌರಕಾರ್ಮಿಕರ ಪಾದ ತೊಳೆದು, ಪೂಜಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದರು ಎಂದರು.

ಪೌರಕಾರ್ಮಿಕರು ಪ್ರಾಮಾಣಿಕತೆಯಿಂದ ನಿಮ್ಮ ನಿಮ್ಮ ವಾರ್ಡುಗಳಲ್ಲಿ ಸೇವೆ ಸಲ್ಲಿಸಿದರೆ ಮಾತ್ರ ಸಮಾಜದಲ್ಲಿ ಒಳ್ಳೆಯ ಹೆಸರುಗಳಿಸಲು ಸಾಧ್ಯವಾಗುತ್ತದೆ.ಇದರ ಜೊತೆಯಲ್ಲಿ ನಿಮ್ಮ ಆರೋಗ್ಯ ಸದಾ ಕಾಪಾಡಿಕೊಳ್ಳಬೇಕೆಂದು ಪೌರಕಾರ್ಮಿಕರಿಗೆ ಕರೆ ನೀಡಿದರು.

ನಿವೃತ್ತ ಪ್ರಾಚಾರ್ಯರಾದ ಲಿಂಗದೇವರು ಮಾತನಾಡಿ, ಪೌರಕಾರ್ಮಿಕರು ಇಲ್ಲಿದಿದ್ದರೆ ನಮ್ಮ ನಗರದ ಸ್ವಚ್ಛತೆ ಹಾಳಾಗುತ್ತದೆ ಅವರನ್ನು ನಾವು ದೇವರಂತೆ ಪೂಜಿಸುತ್ತೇವೆ.ನಮ್ಮಗಳ ಕೊಳೆ ತೊಳೆಯುವ ಅವರ ಬದುಕು ಹಸನಾಗುವಂತೆ ನಾವೆಲ್ಲರೂ ಪ್ರೇರೆಪಿಸಬೇಕಿದೆ ಎಂದರು

26ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಹೆಚ್ ಮಲ್ಲಿಕಾರ್ಜುನಯ್ಯ ಮಾತನಾಡಿ,ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮಾತ್ರ ನಗರದ ಸ್ವಚ್ಛತೆ ಸಾಂಕ್ರಾಮಿಕ ಕಾಯಿಲೆಗಳು ದೂರವಾಗುವುದರ ಜೊತೆಗೆ ನಗರದ ಸೌಂದರ್ಯವು ಹೆಚ್ಚುತ್ತದೆ.ಪಿಕೆಎಸ್‌ಗಳು ನಿಷ್ಠೆಯಿಂದ ಕೆಲಸ ಮಾಡಿದರೆ ಸಮಸ್ಯೆಗಳು ಸದಾ ತವಾಗೆ ಬಗೆಹರಿಯುತ್ತದೆ.ಇಲ್ಲವಾದರೆ ವಾರ್ಡಿನ ತುಂಬ ಖಾಲಿ ಇರುವ ಜಾಗಗಳಲ್ಲಿ ಮರದ ಕೆಳಗಡೆ ಎಲ್ಲಂದರೆ ಕಸದ ರಾಶಿ ಬಿದ್ದಿರುತ್ತದೆ.ಹಾಗಾಗಿ ಪೌರಕಾರ್ಮಿಕರ ಪರಿಶ್ರಮ ಅವರ ಸೇವೆ ನಮಗೆ ದಿನನಿತ್ಯ ಬೇಕಾಗಿರುತ್ತದೆ.ಇಂತಹ ಸಂದರ್ಭದಲ್ಲಿ ಸೂಪರ್ವೈಸರ್ ಗಂಗಾರಾಮಯ್ಯ ರವರ ಸೇವೆ ಅಪಾರವಾದದ್ದು.ಅವರು ತುಮಕೂರು ಮಹಾನಗರ ಪಾಲಿಕೆಗೆ 42 ವರ್ಷಗಳ ಸುದೀರ್ಘ ಸೇವೆ ಮಾಡಿದ್ದಾರೆ.ಇನ್ನು ಮುಂದೆ ನಿವೃತ್ತಿ ಜೀವನ ತುಂಬಾ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು

ಮಹಾನಗರ ಪಾಲಿಕೆ ಸದಸ್ಯರಾದ ಚಂದ್ರಕಲಾ ಪುಟ್ಟರಾಜು ಮಾತನಾಡಿ,ನಮ್ಮ ವಾರ್ಡಿನಲ್ಲಿ ನಾಲ್ಕು ವರ್ಷದಿಂದ ತುಂಬಾ ಅತ್ಯುತ್ತಮವಾದ ಕೆಲಸಗಳನ್ನು ಮಾಡಿ ನಾಗರಿಕರಲ್ಲಿ ಉತ್ತಮ ಪ್ರಶಂಸೆಗೆ ಒಳಗಾಗಿದ್ದಾರೆ.ಅವರಿಗೆ ಶುಭ ಕೋರುತ್ತಾ ಇನ್ನು ಮುಂದೆ ವಾರ್ಡುಗಳಲ್ಲಿ ಗಂಗಾರಾಮಯ್ಯನವರಂತೆ, ನೀವುಗಳು ಸಹ ಕೆಲಸ ಮಾಡಬೇಕೆಂದು ಪೌರಕಾರ್ಮಿಕರಿಗೆ ತಿಳಿಹೇಳಿದರು
ಕಾರ್ಯಕ್ರಮದಲ್ಲಿ ಕಾವ್ಯ ಶೇಖರ್,ಆರ್.ಎಸ್.ಪ್ರಭು,ಸಂತೋಷ್ ಮಲ್ನಾಡ್,ಹೆಚ್.ಎಸ್.ವಿರೂಪಾಕ್ಷಪ್ಪ,ಸಿಮೆಂಟ್ ಮಂಜು ನಾಥ್,ಸುಜಾತ ಚಂದ್ರಶೇಖರ್,ನಟರಾಜ್,ಸಿಎಂಸಿ ಮಹೇಶ್,ಶಿವಕುಮಾರ್,ರಾಮಚಂದ್ರಪ್ಪ,ಸಿದ್ದಪ್ಪ.ವಿ.ರಕ್ಷಿತ್,ಹರೀಶ್, ಲಲಿತ್ ಮಲ್ಲಪ್ಪ, ಮಧುಸೂದನ್, ಸನತ್‌ ಜಯಸಿಂಹ, ಚಂದನ್,ಜಗದಾಂಬ,ನಟರಾಜ್,ಸಂತೋಷ್,ರವಿ,ಚಂದ್ರಪ್ಪ, ಮಂಜುನಾಥ್, ರಘು ಮುಂತಾದವರು ಉಪಸ್ಥಿತರಿದ್ದರು

Verified by MonsterInsights