ದ್ವೇಷ ಭಾಷಣ: ಪಂಪ್ ವೆಲ್ ಜಾಮೀನು ಅರ್ಜಿ ವಜಾ

ಡೆಸ್ಕ್
1 Min Read

ತುಮಕೂರು: ವಿಎಚ್ ಪಿ ನಾಯಕ ಶರಣ್ ಪಂಪ್ವೆಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ತುಮಕೂರು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದ್ದು, ನ್ಯಾಯಾಲಯ ಜಾಮೀನು ನೀಡಿದರೆ ಸಾರ್ವಜನಿಕ ಶಾಂತಿಯನ್ನು ಹಾಳುಮಾಡಲು ಪಂಪ್‌ವೆಲ್ ಸಾರ್ವಜನಿಕವಾಗಿ ಮತ್ತೆ ಭಾಷಣ ಮಾಡುವ ಸಾಧ್ಯತೆಗಳಿವೆ” ಎಂದು ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.

ಜನವರಿ 28 ರಂದು ನಗರದ ಟೌನ್ ಹಾಲ್ ನಲ್ಲಿ ನಡೆದ ಹಿಂದೂಪರ ಸಂಘಟನೆಯ ಕಾರ್ಯಕ್ರಮದಲ್ಲಿ ವಿಎಚ್‌ಪಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್ 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಂರ ಹತ್ಯೆಗಳು ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ಯುವಕನ ಹತ್ಯೆಯನ್ನು ಹಿಂದೂಗಳ ಶಕ್ತಿ ಪ್ರದರ್ಶನ ಎಂದು ಪ್ರತಿಪಾದಿಸಿದರು.

ಈ ಹಿನ್ನಲೆ ತುಮಕೂರು ನಗರ ಪೊಲೀಸರು, ನಿವಾಸಿ ಸೈಯದ್ ಬುರ್ಹಾನುದ್ದೀನ್ ಎಂಬುವವರ ದೂರಿನ ಆಧಾರದ ಮೇಲೆ ಜನವರಿ 30 ರಂದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 295 ಎ ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದಕ್ಕಾಗಿ ಪ್ರಕರಣ ದಾಖಲಿಸಿದರು.

ಫೆಬ್ರವರಿ 14 ರಂದು ವಿಎಚ್‌ಪಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದೆ. ಇನ್ನು ಪ್ರಕರಣದ ಗಂಭೀರತೆಯನ್ನು ನಿರ್ಧರಿಸುವುದು ಪೊಲೀಸರೇ ಎಂದು ಹೇಳಿದೆ.

Share this Article
Verified by MonsterInsights