ಬಾಲಿವುಡ್ ಮಂದಿಯ ವೈರಲ್ ವಿಚಾರಗಳಲ್ಲಿ ಈಗ ನಟಿ ಸ್ವರ ಭಾಸ್ಕರ್ ಮದುವೆ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರು ಹೆಚ್ಚಿನ ಆಸಕ್ತಿ ತೋರುತ್ತಾರೆ, ಲವ್ಅಫೈರ್, ಮದುವೆ ವಿಚಾರದಲ್ಲಿ ಇನ್ನಷ್ಟು ಕುತೂಹಲ ಜನರಲ್ಲಿ ಇರುತ್ತದೆ.
ಇತ್ತಿಚೆಗೆ ಸಮಾಜವಾದಿಪಕ್ಷದ ಮುಖಂಡ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರುವ ಬಾಲಿವುಡ್ ನಟಿ ಸ್ವರ ಭಾಸ್ಕರ್, ಮದುವೆ ವಿಚಾರ ಈಗ ಸಾಕಷ್ಟು ವೈರಲ್ ಆಗುತ್ತಿದ್ದು, ಒಂದು ಕಾಲದಲ್ಲಿ ಅಣ್ಣ ಎಂದು ಕರೆದಿದ್ದ ವ್ಯಕ್ತಿಯನ್ನೇ ಮದ್ವೆಯಾಗಿರುವ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.
2020ರಲ್ಲಿ ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದ ಸ್ವರಾ ಭಾಸ್ಕರ್, ಫಹಾದ್ ಅಹ್ಮದ್ ಅವರನ್ನು ಅಣ್ಣ , ಭಾಯ್ ಎಂದೆಲ್ ಕರೆದಿದ್ದರು, ಫಹಾದ್ ಹುಟ್ಟು ಹಬ್ಬದಲ್ಲಿಯೂ ಭಾಯ್ ಎಂದು ವಿಶ್ ಮಾಡಿದ್ದರು, ಅಣ್ಣ ಎಂದು ಕರೆದು ಮದ್ವೆಯಾಗಿರುವುದೇಕೆ ಎಂದು ಸ್ವರಾ ಭಾಸ್ಕರ್ ಮೇಲೆ ನೆಟಿಜನ್ಸ್ ಟ್ರೋಲ್ ಮಾಡುತ್ತಿದ್ದಾರೆ.