ಕೊರಟಗೆರೆ: ರಾಷ್ಟ್ರಧ್ವಜ ಕ್ಕೆ ಅವಮಾನ ಮಾಡಿದ ಬೂದಗವಿ ಗ್ರಾ.ಪಂ.ಪಿಡಿಒ ವಿಜಯಕುಮಾರಿ ಅವರನ್ನು ಅಮಾನತುಗೊಳಿಸಿ ಜಿ.ಪಂ.ಸಿಇಒ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ.
ರಾಷ್ಟ್ರಧ್ವಜವನ್ನು ಕಚೇರಿ ದಿನದ ಅವಧಿಯಲ್ಲಿ ಹಾರಿಸುತ್ತೇವೆ, ರಜೆ ದಿನಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ನಿಯಮ ಇಲ್ಲ ಎಂದು ಉಡಾಫೆ ಉತ್ತರ ನೀಡಿದ ಬಗ್ಗೆ ಪ್ರಜಾಕಹಳೆ ವರದಿ ಪ್ರಕಟಿಸಿತ್ತು, ವರದಿ ಪ್ರಕಟಗೊಂಡ ನಂತರ ಜಿ.ಪಂ.ಸಿಇಒ ವಿದ್ಯಾಕುಮಾರಿ ಪಿಡಿಒ ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.