ತುಮಕೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಗಂಡನ ಕೊಲೆಗೆ ಹೆಂಡತಿ ಸುಫಾರಿ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮೂರು ಮಂದಿಯನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಫೆ.3 ರಂದು ಕುಣಿಗಲ್ ಪಟ್ಟಣದಲ್ಲಿ ಸೀನಪ್ಪನಹಳ್ಳಿಯ ಮಂಜುನಾಥ್ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿ ಸೀನಪ್ಪಮಹಳ್ಳಿ ಗ್ರಾಮದ ತನ್ನ ಸ್ವಂತ ಮನೆಗೆ ಬಂದಿದ್ದಾನೆ. ನಂತರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಆತನಿಗೆ ಕರೆ ಬಂದಿದ್ದಕ್ಕಾಗಿ ಎದ್ದು ಹೊರ ಹೋಗಿದ್ದು, ಮತ್ತೇ ಆತ ಮನೆಗೆ ವಾಪಸ್ಸಾಗಿಲ್ಲ. ಊರಿನಿಂದ ಒಂದು ಕಿ.ಮೀ ದೂರದಲ್ಲಿ ಇರುವ ಕಿತ್ನಾಮಂಗಲ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು.
ಪ್ರಕರಣದ ಬೆನ್ನತ್ತಿದ ಕುಣಿಗಲ್ ಪೊಲೀಸರು ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಎಂಬವರ ಕೊಲೆಗೆ ಸಂಬಂಧಿಸಿದಂತೆ ಅತನ ಹೆಂಡತಿ ಹರ್ಷಿತಾ (20) ಹಾಗೂ ಆಕೆಯ ಚಿಕ್ಕಮ್ಮನ ಮಗ ರಘು, ರವಿಕಿರಣ್ ಅವರನ್ನು ಬಂಧಿಸಿದ್ದಾರೆ.
ಸಂಬಂಧ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿ, ತನಿಖೆ ಆರಂಭಿಸಿ ಆರೋಪಿಗಳ ಪೈಕಿ ಮೂವರನ್ನು ಬಂಧಿಸಿದ್ದಾರೆ. ಕೊಲೆಗೆ ಹೆಂಡತಿಯೇ ಸುಫಾರಿ ನೀಡಿರುವುದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾಗ ತಿಳಿದು ಬಂದಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ