ಜಾತಿಗೆ ಅತೀತ ಪಕುಶದ ಜಿಲ್ಲೆಗೆ ಅದ್ಯಕ್ಷರು, ಬಂದೋರಿಗೆಲ್ಲಾ ನೀವು ಹಿಂದುಳಿದವ್ರ ಅನ್ನುತ್ತಿದ್ದಾರಂತೆ, ಹಿಂದುಳಿದವ್ರು ಅಂದ್ರೆ ಅದರಲ್ಲಿ ಯಾವ್ದು ಅಂತ ಒಳಹೊಕ್ಕು ಒಳ-ಉಪ ಜಾತಿಗಳನ್ನು ಪಕುಶದ ಕಚೇರಿಯಲ್ಲಿ ಖುಲ್ಲಾಂಖುಲ್ಲಾ ಮಾತನಾಡುತ್ತಿರುವುದು ಜಾತ್ಯಾತೀತರಿಗೆಲ್ಲ ಇರಿಸುಮುರಿಸಿಗೆ ಕಾರಣವಾಗಿದ್ಯಂತಲ್ಲ,,
ಇಂತಿಪ್ಪ ಜಾತ್ಯಾತೀತ ಪಕುಶಕ್ಕೆ ಕೋ”ಗಿಲೆ”ಯಂತಾಗಿರೋ ಅದುಧ್ಯಕ್ಷರು ಹಿಂದೆಲ್ಲ ಅ ಹಿಂದ ಅಂದು ಜಾತಿ ಸಂಘ ಅಟನೆ ಮಾಡಿ, ಈಗ ಬಯಸದೇ ಬಂದ್ರು ದಕ್ಕದ ಅಧಿಕಾರವನ್ನು ನಿಧಾನಕ್ಕೆ ಕೃಪ್ ಆರ್ಶೀವಾದಕ್ಕೆ ಬಾಡೂಟವ ಗೋಪಾಲನಿಗೆ ನೈವೇದ್ಯ ಮಾಡಿ, ರಾಜ ಮಹಾರಾಜರ ಸಹಾಯ ಹಸ್ತದಿಂದ ಗದ್ದುಗೆಗೆ ಏರಿದರು ಸಹ, ನೈವೇದ್ಯವನ್ನು ಮಾಡಿಸೋದು ಕಡ್ಮೆ ಮಾಡಿಲ್ಲವಂತಲ್ಲ,, ಪರಮಪ್ರಿಯವಾಗಿದ್ದುಕೊಂಡೆ,, ಪರಮಾಪ್ರಿಯರಿಗೆ “ಹಸ್ತಲಾಘವ” ಮಾಡಿ ಅದ್ ಇದಿಕಾರವನ್ನು ಅನ್ ಭವಿಸೋ ಕಾಲದೋಳಗೆ, ಪಕುಶದ ಸಿದ್ ಅಂತವನ್ನು ಗಾಳಿಗೆ ತೂರಿ,, ಬಂದ ಕಾರ್ ಕರ್ತರ ಜಾತಿ,,ಉಪ ಜಾತಿಯನ್ನು ಕೇಳುವುದು ಸರಿಯೇ ಚಾಂದ್ ಈಶ್ವರ..!!!