ಮಧುಗಿರಿ : ಕರ್ತವ್ಯದಲ್ಲಿದ್ದಾಗಲೇ ಶುಶ್ರೂಕಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಮೃತರಾಗಿದ್ದು ಸಿಬ್ಬಂದಿಗಳು ಹಾಗೂ ಕುಟುಂಬಸ್ಥರ ಆಕ್ರಂದನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಶುಶ್ರೂಕಿ ಭಾರತಿ (59) ಮೃತ ದುರ್ಧೈವಿಯಾಗಿದ್ದಾರೆ. ಸ್ವಂತ ಊರು ಪಾವಗಡವಾಗಿದ್ದು, ಶುಕ್ರವಾರ ಅಲ್ಲಿನ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮದುವೆಯಾಗದ ಭಾರತಿಯವರು ತಮ್ಮ ತಂಗಿಯ ಮಕ್ಕಳನ್ನೇ ದತ್ತುಪಡೆದು ಸಾಕುತ್ತಿದ್ದರು.
ಇವರು ಕಳೆದ 24 ವರ್ಷದಿಂದ ಮಧುಗಿರಿಯ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದು ಅಧಿಕಾರಿಗಳ ಹಾಗೂ ಸಹೋದ್ಯೋಗಿಗಳ ಪ್ರೀತಿ ಸಂಪಾದಿಸಿದ್ದರು. ಇವರು ಗುರುವಾರ ರಾತ್ರಿ ಪಾಳಯದಲ್ಲಿ ಕರ್ತವ್ಯದಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು ಪ್ರಥಮ ಚಿಕಿತ್ಸೆ ನೀಡಿ ತುಮಕೂರಿಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ಇದನ್ನೂ ಓದಿರಿ
ಬಸ್‍ಗಾಗಿ ಮಕ್ಕಳ ಧರಣಿ : ಸರ್ಕಾರದ ವಿರುದ್ಧ ಘೋಷಣೆ