ಮಂಗ್ಲಿ ಹಾಡಿಗೆ ಮನಸೋತ ಬಳ್ಳಾರಿ ಮಂದಿ

ಗಿರೀಶ್
1 Min Read

ಹಾಡುಗಾರ್ತಿ ಮಂಗ್ಲಿ( ಸತ್ಯವತಿ ರಾಥೋಡ್) ಅವರು ಬಳ್ಳಾರಿ ಉತ್ಸವ ಕಾರ್ಯಕ್ರಮದಲ್ಲಿ ಮೊದಲಿಗೆ ಡಾ. ರಾಜಕುಮಾರ್ ಅಭಿನಯದ ಆಕಸ್ಮಿಕ ಚಿತ್ರದ ಜನಪ್ರಿಯ ಗೀತೆಯಾದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುವ ಮೂಲಕ ಸಂಗೀತ ರಸಮಂಜರಿ ಆರಂಭಿಸಿದರು.

ನಗರದ ಮುನ್ಸಿಪಲ್ ಕಾಲೇಜು ಆವರದಲ್ಲಿ ಶನಿವಾರ ಜರುಗಿದ ಬಳ್ಳಾರಿ ಉತ್ಸವ ಉದ್ಘಾಟನೆ ಸಮಾರಂಭದ ನಂತರ ಟಾಲಿವುಡ್ ಖ್ಯಾತ ಗಾಯಕಿ ಮಂಗ್ಲಿ ಅವರ ಸಂಗೀತ ಕಾರ್ಯಕ್ರಮ ನಡೆಯಿತು.

ಕಣ್ಣು ಹೊಡಿಯಾಕ ಮೊನ್ನೆ ಕಲತೇನಿ…,ಯಾವನೋ ಇವನು ಗಿಲ್ಲಕ್ಕೊ ಏಳೇಳು ಬೆಟ್ಟ ದಾಟ್ಕೊಂಡು ಬಂದ ಶಿವ ಗಿಲ್ಲಕ್ಕೊ….ಸಾರಗಂದ ದರಿಯಾ….ಊ ಅಂತಿಯಾ ಮಾವ ಊಹು ಅಂತಿಯಾ…ರಾಮಾ‌ ರಾಮಾ…ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ, ರಾಮುಲೋ ರಾಮುಲೋ, ರಾ ರಾ ರಕ್ಕಮ್ಮ, ಹಾಡಿಗಳಿಗೆ ನೆರೆದ ಜನರು ಹುಚ್ಚೆದ್ದು ಕುಣಿದು ಕುಪ್ಪಳಿಸಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

 

ನಟ ಪುನಿತ್ ರಾಜಕುಮಾರ್ ಅವರಿಗಾಗಿ ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡಿ ಸೇರಿದ ಜನಸ್ತೋಮದ ಮನ ರಂಜಿಸುವಲ್ಲಿ ಮಂಗ್ಲಿ ಯಶ ಕಂಡರು. ನಟನೊಬ್ಬ ಅಭಿಮಾನಿಗಳ ಹೃದಯ ಮಂದಿರದಲ್ಲಿ ನಿರಂತರ ಉಳಿದು ದೇವರಾಗಿ ಪೂಜಿಸಲ್ಪಡುತ್ತಿರುವುದು ನಿಜಕ್ಕು ಅಚ್ಚರಿ ವಿಷಯ ಎಂದರು.

Share this Article
Verified by MonsterInsights