ಅನಾರೋಗ್ಯರಿಂದ ಸಾವನ್ನಪ್ಪಿದ ಮೂರು ವರ್ಷದ ಬಾಲಕನ ಅಂತ್ಯಕ್ರಿಯೆಯನ್ನು ಮಾಡಿದ ನಂತರ ಬಾಲಕ ಬದುಕಿದ್ದಾನೆ ಎಂದು ಅಜ್ಜಿಗೆ ಕನಸು ಬಿದ್ದಿದ್ದರಿಂದ ಸಮಾಧಿಯನ್ನು ಅಗೆದು ತೆಗೆದು ಪೂಜೆ ಮಾಡಿದ್ದಾರೆ.
ಇಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖ್ನೋದಲ್ಲಿ ನಡೆದಿದ್ದು, ಪೊಲೀಸರ ಮಾಹಿತಿ ಪ್ರಕಾರ ಲಖ್ನೋನದ ಸೈದ್ ಪುರ್ ಮಹರಿ ಗ್ರಾಮದ ಮೂರು ವರ್ಷದ ಬಾಲಕ ಅಕ್ಷತ್ ಅನಾರೋಗ್ಯದಿಂದ ಕಳೆದ ಶನಿವಾರ ಸಾವನ್ನಪ್ಪಿದ್ದಾನೆ, ಮಗು ಸಾವನ್ನಪ್ಪಿದ ಬಳಿಕ ಕುಟುಂಬದವರು ಮಗುವಿನ ಅಂತ್ಯ ಸಂಸ್ಕಾರ ಮಾಡಿ ಮನೆಗೆ ಬಂದಿದ್ದಾರೆ.
ಇದೆಲ್ಲಾ ಆಗಿ ಮೂರ್ನಾಲ್ಕು ದಿನದ ನಂತರ ಸಾವನ್ನಪ್ಪಿದ ಹುಡುಗ ಬರುಕೇ ಇರುವಂತೆ ಅಜ್ಜಿಗೆ ಕನಸು ಬಿದ್ದಿದ್ದು, ಇದನ್ನು ಆತನ ತಂದೆಗೆ ತಿಳಿಸಿದ್ದಾರೆ..
ಅಜ್ಜಿಗೆ ಬಿದ್ದ ಕನಸಿನ ಬಗ್ಗೆ ತಂದೆ ಒಬ್ಬ ಮಾಂತ್ರಿಕನಿಗೆ ಹೇಳಿದ್ದಾನೆ, ಆ ಮಾಂತ್ರಿಕ ತಂದೆ ಹೇಳಿದ ವಿಚಾರವನ್ನು ಕೇಳಿ, ಬಾಲಕ ಬದುಕೇ ಇದ್ದಾನೆ, ಸಮಾಧಿಯಿಂದ ಹೊರಗೆ ತೆಗೆಯಲೇ ಬೇಕು, ಹೊರ ತೆಗೆದು ಮಂತ್ರ ಹೇಳಿದ್ರೆ ಬದುಕುತ್ತಾನೆ ಎಂಬ ಮೂಢ ನಂಬಿಕೆಯಿಂದ ಪೋಷಕರು ಮಾಂತ್ರಿಕ ಹೇಳಿದಂತೆ ಮಾಡಿದ್ದಾರೆ.
ಈ ವಿಚಾರ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಬಾಲಕನ ಮೃತ ದೇಹವನ್ನು ಆಸ್ಪತ್ರೆಗೆ ಕಳುಹಿಸಿ, ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದು, ಇದನ್ನೆಲ್ಲ ಹೇಳಿಕೊಟ್ಟ ಮಾಂತ್ರಿಕ ಪರಾರಿಯಾಗಿದ್ದಾನೆ, ಅಜ್ಜಿ ಮಾತು ನಂಬಿ ಮಾಂತ್ರಿಕನ ಮಾತು ಕೇಳಿದ ಕುಟುಂಬ ಈಗ ಜೈಲು ಸೇರುವಂತಾಗಿದೆ.