ಡಾ.ರಾಜ್ ಕುಮಾರ್ ಜೊತೆಗೆ ನಟಿಸಿದ್ದ ಬಹುಬೇಡಿಕೆಯ ನಟಿ ಕಾಂಚನ ಇಂದಿಗೂ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಅದಕ್ಕೆಲ್ಲ ಕಾರಣ ಒಬ್ಬ, ಆ ಒಬ್ಬನಿಂದಾಗಿ ಪೋಷಕರನ್ನು ಬಿಟ್ಟು ಮನೆಯಿಂದ ಹೊರಬಂದು, ನ್ಯಾಯಕ್ಕಾಗಿ ನ್ಯಾಯಾಲಯದ ಸುತ್ತ ಅಲೆಯುತ್ತಿದ್ದಾರೆ.
60-70ರ ದಶಕದಲ್ಲಿ ಗಗನಸಖಿಯಾಗಿದ್ದ ವಸುಂಧರ ದೇವಿ, ಸಿನಿಮಾರಂಗಕ್ಕೆ ಬಂದ ನಂತರ ಕಾಂಚನ ಎಂದು ಹೆಸರು ಬದಲಾಯಿಸಿಕೊಳ್ಳುತ್ತಾರೆ. ತಮಿಳು, ಮಲೆಯಾಳಂ, ತೆಲುಗು, ಕನ್ನಡ, ಹಿಂದಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ನಟಿಸಿದ್ದಾರೆ.
ಡಾ.ರಾಜ್ ಕುಮಾರ್ ಅವರೊಂದಿಗೆ ಬಭ್ರುವಾಹನ, ನಾನೊಬ್ಬ ಕಳ್ಳ, ಶಂಕರ್ ಗುರು, ಬಿಳಿಗಿರಿಯ ಬನದಲ್ಲಿ, ಭಾಗ್ಯವಂತ, ಭಕ್ತ ಪ್ರಹ್ಲಾದ, ಸಮಯದ ಗೊಂಬೆ, ದೇವತಾ ಮನುಷ್ಯ, ರಥ ಸಪ್ತಮಿ ಸೇರಿದಂತೆ ಕನ್ನಡ 41 ಚಿತ್ರಗಳಲ್ಲಿ ನಟಿಸಿ ಜನಮನ್ನಣೆಯನ್ನು ಪಡೆದರು ಸಹ ನಿಜ ಜೀವನದಲ್ಲಿ ಮಾತ್ರ ಪೋಷಕರಿಂದ ದೂರವಾಗಿ ಒಬ್ಬಂಟಿಯಾಗಿ ಜೀವನ ಕಳೆಯುವಂತಾಗಿದೆ.
ಸಿನಿಮಾಕ್ಕೆ ಬರುವ ಮುಂಚೆಯೇ ಗಗನಸಖಿಯಾಗಿ 600 ರೂ ಸಂಬಳಕ್ಕೆ ದುಡಿಯುತ್ತಿದ್ದ ಕಾಂಚನ ಅವರು, ಸಿನಿಮಾಕ್ಕೆ ಬಂದ ಸ್ವಲ್ಪ ಸಮಯದಲ್ಲಿಯೇ ಯಶಸ್ವಿ ನಟಿಯಾದರೂ, ಎಲ್ಲ ಭಾಷೆಗಳಲ್ಲಿ ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ನಟಿಸುತ್ತಿದ್ದರೆ, ಇಂತ ಕಾಂಚನ ದುಡಿದ ಹಣವನ್ನು ತಂದೆ-ತಾಯಿ, ಕಾಂಚನ ಅವರ ಚಿಕ್ಕಮ್ಮನ ಮಗನ ಮಾತಿಗೆ ಜೋತು ಬಿದ್ದರು.
ಕಾಂಚನ ಅವರಿಗಿಂತ ಅವರ ಚಿಕ್ಕಮ್ಮನ ಮಗನ ಮಾತಿಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿತ್ತು, ಅವರ ಪೋಷಕರು ಮಗಳನ್ನು ಕಡೆಗಣಿಸುತ್ತದೆ ಅಂತ ಚಿಕ್ಕಮ್ಮನ ಮಗ ಇಡೀ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಹೊಂಚು ಹಾಕಿದ್ದ, ಇದರಿಂದ ಬೇಸರಗೊಂಡ ಕಾಂಚನ ಅವರು 1996ರಲ್ಲಿ ಮನೆಯಿಂದ ಹೊರಬಂದರು, ತಂದೆ-ತಾಯಿ ಬದಲಾಗುತ್ತಾರೆ ಎಂದು ಕಾದರು, ಆದರೆ ಆತನನ್ನು ನಂಬಿ ಹೆತ್ತ ಮಗಳಿಗೆ ಮೋಸ ಮಾಡಿದರು. 12 ವರ್ಷದಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾಂಚನ ಅವರು,,ನನಗೆ ಯಾರು ಇಲ್ಲ ಎಂದು ದುಃಖ ಪಡುವುದಿಲ್ಲ, ನನಗೆ ದೇವರು ಜೊತೆ ಇದ್ದಾನೆ ಎಂದು ಕಾಂಚನ ಕಣ್ಣೀರು ಹಾಕುತ್ತಾರೆ.