ಅಪ್ರಾಪ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಡೆಸ್ಕ್
1 Min Read
Crime
Crime
Crime
ಮಧುಗಿರಿ : ಮದುವೆಯಾಗುವಂತೆ ಪೀಡಿಸಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಪಟ್ಟಣದ ಗುರುವಡೇರಹಳ್ಳಿ ಗ್ರಾಮದ ಜಿ.ಎನ್. ವೆಂಕಟೇಶ್ ಪುತ್ರಿ ಲಕ್ಷ್ಮೀ(17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ.
ಮಗಳ ಆತ್ಮಹತ್ಯೆಗೆ ಮಂಜುನಾಥ ಎಂಬ ಯುವಕನೇ ಕಾರಣವಾಗಿದ್ದು,  ಈತನು ನನ್ನ ಮಗಳನ್ನು ಮದುವೆಯಾಗು ಇಲ್ಲದಿದ್ದಲ್ಲಿ ನೀನು ನನ್ನ ಜೊತೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ನನ್ನ ಮಗಳು ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ತಂದೆ ಜಿಎನ್ ವೆಂಕಟೇಶ್ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Share this Article
Verified by MonsterInsights