ಓದುಗರ ಕಲ್ಪನೆ ಭಾವನೆಗಳಿಗೆ ಪತ್ರಿಕೆ ಹೊಣೆಯಲ್ಲ
* ರಾಜ್ಯ ಸಭಾ ಸದಸ್ಯ ಎಲ್ಹನುಮಂತಯ್ಯಂಗೆ ಸೂಸ್ತೆ ಸುಮಾರು, ಏಸ್ತೇ ಢಮಾರು ಅಂಬೋ ನೀತಿ ಸಖತ್ತು ಸಿದ್ದಿ ಆಗಿದ್ಯಂತಲ್ಲಾ..ಛೇ
* ಕೇರ್ ಮುಖಿ ಮುಖಂಡ ಕೇಆರ್ನಾಯಕರ ಟೈಲರಂಗ್ಡಿಗೆ ಬರ್ತಿದ್ದಾಗ ಈ ಎಲ್ಹನುಮಂತು ಇಂಗಿರ್ಲಿಲ್ಲವಂತಲ್ಲಾ..ಛೀ
* ತುಂಬಾಡಿ ದೇವ್ರಾಜನೆಂಬೋ ಲೀಡರ್ರು ಜೆಡಿಎಸ್ನ ಮಹಾನ್ ಆಗಿದ್ದಾರಂತಲ್ಲ…ಛೇ
* ಬೆಳ್ಳೀ ಬ್ಲಡ್ ನ ನೆರಳಾಗಿ, ಮರದಿಂದ ಬಿದ್ದು ವೇಸ್ಟಾಗೋ ನೇರಿಳೆ ಹಣ್ಣಾಗ್ತಿದ್ರೂ…. ತೆರೇ ಮರೆಯಲ್ಲಿ ದುಂಡಾಗಿ ಬಿಡೋ ಕಲೆ ಈ ತುಂಬಾಡಿ ದೇವ್ರಾಜಂಗೆ ಕರಗತ ಆಗಿದ್ಯಂತಲ್ಲಾ ..ಛೀ
* ಹುಲುಸಾಗಿ ಬೆಳೆದ ಹುಸಣೇಮರದ ಮುಂದೆ ಮನೆ ಕಟ್ಟಬೇಡಿ ಅಂದೋರ್ನ ಗುರ್ರಾಯಿಸಿ….ಫಸಲು ಕೊಡ್ತಾ ಐತೆ, ಕಡಿಯಾಕತದಾ…ಅಂತ ಗೊಣಗಿ, ಗೊಣ್ಣೆ ವೇಸ್ಟಾಗಬಾರದೂಂತ ನುಂಗಿದವನನ್ನು ಏನಂಬೆ ಕೋರಾಓಬಳೀಶ್ವರಾ….
* ಮೂರಂಕಿ ಕೊಡಿಸೋರಿಗಿಂತ ನಾಲ್ಕಂಕಿ ಅಮೌಂಟು ಕೊಡಿಸೋ ಕುಮಾರನೇ ಬೆಸ್ಟು ಅನ್ಕಂಡ ಬಿಳೀ ಮಾರುತಿಯನ್ನ ಏನಂಬೆ ಸದಾಶಿವೇಶ್ವರಾ…
* ಬೀಜೆಪಿಯಲ್ಲಿ ಗಂಗಸಂದ್ರ ವರ್ಸಸ್ ಹೊಸಲ್ಲಿ ನಡುವೆ ಮುಸುಕಿನ ಗುದ್ದ್ ಆಟ ಮಂಕಾಗಿ ಬಿಟ್ಟಿದ್ಯಂತಲ್ಲ..ಛೇ
* ಶಿರಾದ ಎಕ್ಸ್ ಮ್ಮೇಲ್ಲೇಗಸ್ಟೇ ಹೋಲಿಕೆ ಇರೋ ಮಿಸ್ಟರ್ ಹೊಸಲ್ಲಿಗೆ ಮೀಸೆ ಇಲ್ಲದ ಮನ್ಮಥ ಮೂತಿಯ ಗಂಗಸಂದ್ರಕ್ಕಿರೋ ಸಜ್ಜನಿಕೆ ಇಲ್ಲವಂತಲ್ಲಾ ..ಛೀ
* ಕಮ್ಮೀ ನಿಷ್ಠ ಪಾರ್ಟಿಯಿಂದ ಕಟ್ಟಡ ಕಾರ್ಮಿಕ ಆಗಿರೋ ಕೇರ್ ಮಿಕ ಉಮ್ಮೇಸನು ಕಾರುಮಿಕ ಆಗಿಬಿಡೋ ಕನಸು ಕಾಣ್ತಿದಾನಂತಲ್ಲಾ…ಛೇ
* ಊರ್ಕೆರೆಯ ಕರೀ ಉಮ್ಮೇಸಂಗೆ ಸಿಕ್ಕ ಅವ್ಕಾಶಗಳು ಕೇರ್ ಮಿಕ ಉಮ್ಮೇಸಂಗೆ ಸಿಗಲೇ ಇಲ್ಲವಂತಲ್ಲಾ..ಛೀ
* ರಾಜ್ಯ ವಿಜ್ಞಾನ ಪರಿಷತ್ ಕೊಡದ ಸಣ್ಮಾನ ವೈಜ್ಞಾನಿಕ ಸಂಶೋಧನಾ ಪರಿಷೆಯಲ್ಲಿ ಸಿಕ್ಕ ಮೇಲೆ ಡಾ.ಹೆಚ್.ಎಸ್.ನಿರಂಜನಾರಾಧ್ಯರ ‘ದಾಹ” ಕಿಂಚಿತ್ತು ಇಂಗಿದೆಯಂತಲ್ಲ..ಛೇ
* ಒಣ ಬೇಸಾಯದ ಯತಿರಾಜಂಗೆ ಅಂಥಾ ಸಣ್ಮಾನ ಸಿಗಬಾರದಿತ್ತೆ ..ಛೀ.
* ದುಡಿ ದುಡಿದು ಕಸ್ಟಪಡುವ ಶ್ರಮಜೀವೀ…ಚರಿತ್ರೆ ಚಕ್ರವನ್ನೆ ತಿರುಗಿಸಿದಾ ಶ್ರಮಜೀವೀ… ಸೆಟ್ಹಳ್ಳಿ ಗೇಟ್ ಫ್ಲೈ ಓವರ್ ಕಟ್ಸಿದ್ದೂ ಮಿಸ್ಟರ್ರ್ ಹೊಸಲ್ಲಿ ಅಲ್ವೇ ಅಲ್ಲವಂತಲ್ಲಾ…ಛೇ
* ನಂ ಬಂಕ್ನಾಗ ಕಣ್ರೀ ಅದುನ್ನ ಕಟ್ಸಿದ್ದೂಂತ ಸ್ಮಾರ್ಟ್ ತುಮಕೂರು ಜಗ್ದೀಶ ಆದ್ರೂ ಹೇಳಬಾರದೇ..ಛೀ
* ಕಂಟ್ರಾಕ್ಟರ್ ಗೋಳು ಸೂಸೈಡ್ಮಾಡಿಕೊಳ್ತಿದ್ದಾರೆ ಅಂಬೋದು ಸೀರಿಯಸ್ಸಾಗ್ತಿಲ್ಲವಂತಾಲ್ಲ…ಛೇ
* ಮಂಜೂರಾದ ಯೋಜ್ನೇಲಿ ಕೊಡ್ಲೇಬೇಕಾದೋರ್ಗೆಲ್ಲ.. ಕೊಟ್ಟು ಮಿಕ್ಕಿದ್ರಲಸ್ಟೇ ಕಾಂಗಾರೀ..ಬಿಲ್ ಪವರ್ ಸಿಗೋವರ್ಗೆ ವಿಲ್ ಪವರ್ ಸಖತ್ತಾಗಿರಬೇಕೂಂತ ಯಾವ ಕಂಟ್ರಾಕ್ಟರ್ರೂ ಏಳಿಲ್ಲವಂತಲ್ಲಾ..ಛೀ
* ಕಂಡ ಕಂಡವರಿಗೆಲ್ಲ ನೋಟು ಕೊಡೋ ಬುಟ್ಟಿಕಾ ಬಾಬು ಓಟು ಕೇಳಿದ್ದಕ್ಕಿಂತ ಓತ್ಲಾ ಹೊಡೆದಿದ್ದೆ ಹೆಚ್ಚಂತಲ್ಲ…ಛೇ
* ಆಯ್ಕಂಡ್ ತಿನ್ನೋರ್ಗಿಂತಾ.. ಹಾಯ್ಕಂಡ್ ತಿನ್ನೋ ಹರಟೆಕೋರರು ಈ ಹಟ್ಟೀಕಾ ಅಲಿಯಾಸ್ ಬುಟ್ಟಿಕಾ ಬಾಬು ಸುತ್ತ ಸುಳಿದಾಡ್ತಿದಾರಂತಲ್ಲಾ..ಛೀ
* ಸಿಕ್ಕಿದೋರಿಗೆ ಸೀರುಂಡೆ ಅನ್ತಿದ್ಹಾಗೇ… ಸಿಡುಕ ಮುಖದ ಮಹೇಶಂಗಿಂತ ಮಹಂತೇಶನೇ ಮೇಲಂತಲ್ಲಾ ..ಛೇ
* ಆ ಮಹಂತೇಶಂಗಿತ ಬರೀ ಮಾತಿನ ಪುಟ್ನಂಜಿ ಬಾಯೆಲ್ಲ ಅಪರಂಜಿ ಖ್ಯಾತಿಯ ಮಿಸ್ಟರ್ರ್ ಮಲೇಹಲ್ಲಿಯೇ ಮೇಲೆಂದು ಥೇಟ್ಟು ವಿಲ್ಲನ್ ಠೀವಿಯ ವಾಕೀಶ್ ಉಗ್ಗಡಿಸಿದನಂತಲ್ಲಾ..ಛೀ
*********
ಕೊನೆ ಹನಿ
ನಗು ನಗುತಾ ನಲಿನಲೀ..ಏನೇ ಆಗಲಿ..ಅಂಬೋ ಚಿತ್ರ ಗೀತೆ ಸಾಲುನ್ನ ಡೀಸಿಗಿಂತಾ ಏಡೀಸಿಗೆ ಅರ್ಥ ಆಗಿದ್ಯಂತಲ್ಲಾ..ಛೇಛೇ
“ದಾನ” ದ ಅರ್ಥ ವ್ಯಾಖ್ಯಾನ ಅಗತ್ಯ ಅನಿವಾರ್ಯತೆಗೆಳು ಎಸ್ಪಿಗೆ ಅರ್ಥ ಆದಂತೆ, ಅನೇಕ ಅಧಿಕಾರಿಗಳಿಗೆ ಗೊತ್ತೇ ಇಲ್ಲವಂತಲ್ಲಾ..ಛೀ
- -ತಮ್ಸ್