17 ವರ್ಷದ ಬಾಲಕಿಯನ್ನು ಗರ್ಭೀಣಿ ಮಾಡಿದ ವಿವಿ ವಿದ್ಯಾರ್ಥಿ

ಡೆಸ್ಕ್
1 Min Read
Crime

ತುಮಕೂರು: ವಿವಿಯ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯೊಬ್ಬ 17 ವರ್ಷದ ಬಾಲಕಿಯನ್ನು ಗರ್ಭೀಣಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಂಶೋಧನಾ ವಿದ್ಯಾರ್ಥಿಯಾಗಿದ್ದ ಮಲ್ಲಿಕಾರ್ಜುನ ಮನೆಗೆಲಸ ಮಾಡುತ್ತಿದ್ದ 17 ವರ್ಷದ ಬಾಲಕಿಯನ್ನು ಗರ್ಭೀಣಿ ಮಾಡಿದ್ದು, ತುಮಕೂರು ಮಹಿಳಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Crime
Crime

ಬಾಡಿಗೆ ರೂಂನಲ್ಲಿ ವಾಸವಿದ್ದ ಮಲ್ಲಿಕಾರ್ಜುನ, ಐದು ಜನ ಹೆಣ್ಣು ಮಕ್ಕಳಿರುವ ಕುಟುಂಬದ ಹೆಣ್ಣು ಮಗಳನ್ನು ಪುಸಲಾಯಿಸಿ, ಗರ್ಭೀಣಿ ಮಾಡಿದ್ದು, ಈ ವಿಚಾರ ಬೆಳಕಿಗೆ ಬರದಂತೆ ಮುಚ್ಚಿ ಹಾಕಲು ರಾಜೀ ಪ್ರಯತ್ನವನ್ನು ಮಾಡಿದ್ದ ಎನ್ನಲಾಗಿದೆ.

ಪ್ರಕರಣ ರಾಜೀಯಾಗದೆ ಇದ್ದಾಗ ತಲೆ ಮರೆಸಿಕೊಂಡಿದ್ದು, ಕಳೆದ ಹದಿನೈದು ದಿನದಿಂದ ವಿವಿಯಲ್ಲಿ ಕಾಣಿಸಿಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ, ವಿವಿಯಲ್ಲಿರುವ ಪ್ರಗತಿಪರ ಗುರುಗಳ ಶಿಷ್ಯನಾಗಿದ್ದುಕೊಂಡು ಈ ರೀತಿ ಮಾಡಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

Share this Article
Verified by MonsterInsights