ಹೋದ್ಸಾರಿ ಎಲೆಕ್ಷನ್ನಲ್ಲಿ ಆಣೆ ಮಾಡಿ ವೋಟಿಗೆ ನೋಟು ಕೊಟ್ಟು, ನೋಟಿಗೆ ವೋಟಾಕಿಸಿಕೊಂಡು ಕಣ್ಮರೆಯಾಗಿದ್ದ ಲೀಡ್ರು ಈಗ ಮತ್ತೆ ಕಾಣಿಸಿಕೊಂಡಿದ್ದು, ಟಿಕೇಟಿನ ನಂಬಿಕೆ ಇಲ್ದೆ ಟಿಣಿಂಗ ಮಿಣಿಂಗ ಅಂತ ಅಟ್ ಇಕಾ ಜೋತೆ ಕೈ ಜೋಡಿಸಿ ಯಾತ್ರೆಗೆ ಮೂರು, ಸುಮ್ಕೆ ಇರೋಕೆ ಮೂರು ಅಂತ ಮ್ಯಾಚ್ ಫಿಕ್ಸ್ ಮಾಡ್ಕೊಂಡು ಕಣಕ್ಕೆ ಇಳಿಯದ ದಾಂಡಿಗನಾಗಲು ಮನ್ಸು ಮಾಡಿದ್ದೋರು, ಯಾತ್ರೆಯಲ್ಲಿ ಹೆಸರು ವರ್ ಇಷ್ಟರ ಬಾಯಲ್ಲಿ ಯಾವಾಗ ಬಂತೋ ಆಗ್ಲೆ ಯೂ ಟರನ್ ಹೊಡ್ದು ಮೂರು ಕ್ಯಾಶು, ಒಂದಕ್ಕೆ ಚೆಕ್ಕು ಕೊಟ್ಟು ಇನ್ಮೇಲೆ ನಾನೇ ಓಡ್ತಾನಿ ಟೂಬಳೆ ಅಂತ ಅಟ್ ಇಕಾನಾ ಅಟ್ ಬಂದ್ರಂತೆ, ಫೀಲ್ಡ್ ಗೆ ಇಳಿದಿದ್ರೆ ಆರು ಬರ್ತೀತು ಈಗ ಆರಲ್ಲಿ ಮೂರು ಕೊಟ್ಟವ್ರೇ ಈಗ ನರ್ಸ್ ಗೌಡ್ರು ಆದಿಯಾಗಿ ಮುಖದಂಡರು, ಕಾರ್ ಕರ್ತರ ಉಭಯ ಕುಶಲೋಪಚರಿ ವಿಚಾರ್ಸಿಕೊಂಡು ಎಲೆಕ್ಷನ್ ನಲ್ಲಿ ಫೇಸ್ ಬ್ಯಾಟಿಂಗ್ ಮಾಡೋದಕ್ಕೆ ಫೀಲ್ಡ್ ಗೆ ಇಳಿ ಅಂತ ವರ್ ಇಷ್ಟರು ಸೂಚನೆ ಕೊಟ್ರು ಸಹ ಯಾರನ್ನು ಸೇರದಂತೆ, ಯಾರನ್ನು ಕೇಳ್ದಂತೆ ಮುಖದಂಡರನ್ನು ನೀರ್ ಲಕ್ಷಿಸಿ ಓಡ್ಕೊಂಡು ಇರೋದು ಹಾರ್ಡ್ ಕೋರ್ ಕಾರ್ ಕರ್ತರು ಅಸ್ ಮಾಧಾನ ಮಾಡ್ಕೊಂಡಿದ್ದಾರಂತೆ. ಆಣೆ ಮ್ಯಾಲಾಣೆ ಮಾಡೋದ್ರಲ್ಲಿ ಫೇಮಸ್ಸು ಆಗಿರೋ ಲೀಡ್ರು ಹೋದ್ಸಾರಿ ಮಾಡ್ದಂತೆ ಈ ಸರಿನೂ ಬ್ಯಾರೆ ಪಕುಶದವರನ್ನೇ ನಂಬಿಕೊಂಡು ಅಂಬಿಗನಿಲ್ಲದ ದೋಣಿ ನಡ್ಸೋದಕ್ಕೆ ಹೊಂಟವ್ರೇ ಅಂತ ಲೇವ್ ಅಡಿ ಮಾಡ್ಕೊಂತ್ತಾವ್ರೇ,, ಮನಸ್ಸಿಲ್ಲದ ಮನಸ್ಸಿನಲ್ಲೇ ವರ್ ಇಷ್ಟರು ಕೊಟ್ಟ ವರಿ ಬಗ್ಗೆ ಮ್ಯಾಲ್ನೋಟಕ್ಕೆ ಜೊತೆಗೋದ್ರು ಯಾರಾದ್ರೂ ಬಂದ್ರೆ ಸಾಕಪ್ಪ ಅಂತ ಕುಮ್ ಮಾರಣ್ಣನಿಗೆ ದುಬಾಲು ಬೀಳೋದಕ್ಕೆ ರೆಡಿಯಾಗ್ತಿದ್ದಾರಂತೆ,, ಒಕ್ಕಲ ಬಳ್ಳಿಯವ್ರನ್ನ ವಾಮಗೋಚರವಾಗಿ ಬೈದು ಈಗ ರೋಡ್ಗೆ ಹೆಸರಿಡ್ರಿ ಅಂತ ಪಾಲು ಇಕೆ ಮುಂದ್ಕೋಂದ್ರೆ ಆಗುತ್ತಾ? ಆನು, ನೀನು, ನಾನು ತಾನು ಅಂತ ನಾಕಕ್ಕೇ ಓಟಾದಂಗೆ ಆಗಲ್ವೇ ಅಂತ ಪ್ರೆಸ್ಸೋನೋರ ಮುಂದೆ ಪ್ರ ಸೆಂಟ್ ಮಾಡ್ಕೊಂಡು ಲೀಡ್ರುಗಳು ಗೋ ಗೋ ಗೋಯಿಂದ ಅಂತ ಓಡಾಕೊಂಡು ಇರೋದು ಗಾಂಧಿ ನಗರ ಬಸವಜ್ಯೋತಿಗಳು ಖುಷಿಯಾಗಿಸುವಂತೆ ಮಾಡಿದ್ಯಂತಲ್ಲ!!!