ಕೊಬ್ಬರಿ ಬೆಲೆ ಕುಸಿತ: 14ಕ್ಕೆ ತಿಪಟೂರು ಬಂದ್

 

ತಿಪಟೂರು: ಕೊಬ್ಬರಿ ಬೆಲೆಹೆಚ್ಚಳಕ್ಕೆ ಒತ್ತಾಯಿಸಿ ತಿಪಟೂರು ಹೋರಾಟ ಸಮಿತಿಯಿಂದ ಡಿಸೆಂಬರ್ 14ರಂದು ತಿಪಟೂರು ತಾಲ್ಲೋಕು ಬಂದ್ ಕರೆ ನೀಡಲಾಗಿದೆ.
ಕಲ್ಪತರು ನಾಡು ತಿಪಟೂರು ಭಾಗದ ಜನರ ಜೀವನಾಡಿ ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ತಿಪಟೂರು ಹೋರಾಟ ಸಮಿತಿ ಹಾಗೂ ಸಂಘ ಸಂಸ್ಥೆಗಳ ಒಕ್ಕೂಟದಿಂದ ಡಿಸೆಂಬರ್ 14 ಬುದವಾರ ಸ್ವಯಂ ಪ್ರೇರಿತ ಬಂದ್ ” ಗೆ ಕರೆ ನೀಡಲಾಗಿದ್ದು ರೈತರ ಸಮಸ್ಯೆಗಳ ಪರಿಹಾರಕ್ಕೆ ನಡೆಯುತ್ತಿರುವ ಹೋರಾಟಕ್ಕೆ ತಾಲ್ಲೂಕಿನ ವರ್ತಕರ ವ್ಯಾಪಾರಸ್ಥರು.ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಕರೆನೀಡಿದರು.

ನಗರದ ಖಾಸಗೀ ಹೋಟೆಲ್ ನಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ತೆಂಗು ಕಲ್ಪತರು ನಾಡಿನ ಜನರ ಜೀವನಾಧಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಯಿಂದ ಕೊಬ್ಬರಿ ಬೆಲೆ ಕುಸಿತ ಕಾಣುವಂತ್ತಾಗಿದೆ ಆದರಿಂದ ಡಿಸೆಂಬರ್ 14ರಂದು ತಿಪಟೂರು ನಗರ , ನೊಣವಿನಕೆರೆ , ಕಿಬ್ಬನಹಳ್ಳಿ ಕ್ರಾಸ್ ಹಾಗೂ ಹೊನ್ನವಳ್ಳಿ ಸೇರಿದಂತೆ ಪ್ರಮುಖ ವ್ಯಾಪಾರಿಕೇಂದ್ರಗಳನ್ನ ಸ್ವಯಂ ಪ್ರೇರಣೆಯಿಂದ ಬಂದ್ ಮಾಡುವಂತೆ ಕೋರಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ ದೊರಣೆಯಿಂದ ಹಾಗೂ ತಾಲ್ಲೂಕಿನ ಮಂತ್ರಿಗಳ ಉದಾಸಿನತೆಯಿಂದ ನಮ್ಮ ತಾಲ್ಲೂಕಿನ ರೈತರು ಇವತ್ತು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು , ಬಹಳ ತೊಂದರೆಯಲ್ಲಿ ಸಿಕ್ಕಿಕೊಂಡಿರುತ್ತಾರೆ .
ಕೊಬ್ಬರಿ ಮತ್ತು ತೆಂಗಿನ ಕಾಯಿಗೆ ಪ್ರಸಿದ್ಧವಾಗಿರುವ ತಿಪಟೂರು ಎಪಿಎಂಸಿ ಮಾರುಕಟ್ಟೆ ಬೆಲೆ ಕುಸಿತದಿಂದ ಖಾಲಿ ಖಾಲಿಯಾಗಿದೆ
ಕೊಬ್ಬರಿಯ ತೀವ್ರ ಬೆಲೆ ಕುಸಿತದಿಂದ ರೈತರು ಕೊಬ್ಬರಿಯನ್ನು ಮಾರುಕಟ್ಟೆಗೆ ತರದೆ ಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ನಫೆಡ್ ತೆರೆದು ತಕ್ಷಣ ಕೊಬ್ಬರಿಯನ್ನು ಕೊಳ್ಳುವಂತೆ ಮಾಡುವುದು , ನಫೆಡ್‌ನ ಬೆಲೆಯನ್ನು 11,000 ರೂಪಾಯಿಂದ 12,500 ರೂಪಾಯಿಗಳಿಗೆ ಹೆಚ್ಚಿಸುವುದುರಾಜ್ಯ ಸರ್ಕಾರದ 2000 ದ ಬೆಂಬಲ ಬೆಲೆಯನ್ನು 3000 ಕ್ಕೆ ಹೆಚ್ಚಿಸುವುದು .
ಕೇಂದ್ರ ಸರ್ಕಾರವು ಸಹ ಒಂದು ಸಾವಿರ ರೂಪಾಯಿಗಳ ಬೆಂಬಲ ಬೆಲೆಯನ್ನು ನೀಡಿ ಒಟ್ಟು ರೈತರಿಗೆ ತಮ್ಮ ಉತ್ಪಾದನ ವೆಚ್ಚ 16,000 ರೂಪಾಯಿಗಳಷ್ಟು ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

 ಎತ್ತಿನ ಹೊಳೆ ಯೋಜನೆಯು ತಾಲ್ಲೂಕಿನ ಉದ್ದಕ್ಕೂ ಹೋಗುವ ಯೋಜನೆಯಾಗಿದ್ದು ಭೂಮಿ ಕಳೆದುಕೊಂಡ ರೈತರಿಗೆ ಕಳೆದ 3 ಮಾಡಿ ಪರಿಹಾರ ಪಡೆಯದೆ ಸಿಗದೆ ಎಲ್ಲಾ ಹೋರಾಟಗಳನ್ನು ತೊಂದರೆಗೊಳಗಾಗಿದ್ದಾರೆ ಹಾಗೂ ಕಿಬ್ಬನಹಳ್ಳಿ ಕ್ರಾಸ್‌ನ ರೈತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷತೆಯಿಂದ ಪರಿಹಾರ ಸಿಗದೆ ತುಂಬಾ ನೊಂದಿದ್ದಾರೆ ಎತ್ತಿನ ಹೊಳೆ ಯೋಜನೆ ಪ್ರಾಧಿಕಾರವು ತಕ್ಷಣವೇ ಭೂಮಿಯನ್ನು ವಶ ಪಡಿಸಿಕೊಂಡಿರುವ ರೈತರಿಗೆ ಎಲ್ಲಾ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡುವುದು  ಪಡಿಸಿರುವ ಭೂಮಿಯ ಬೆಲೆಯನ್ನು ಮತ್ತೊಮ್ಮೆ ಪರಿಶೀಲಿಸಿ ವೈಜ್ಞಾನಿಕವಾದ ರೀತಿಯಲ್ಲಿ ಬೆಲೆಗಳನ್ನು ಕಟ್ಟಿ ಕೊಡಬೇಕೆಂದು ಒತ್ತಾಯಿಸಿದರು.

ಪತ್ರಿಕಾ ಗೋಷ್ಟಿ ಯಲ್ಲಿ ನಗರಸಭಾ ಉಪಾಧ್ಯಕ್ಷ ಗಣೇಶ್.ಸದಸ್ಯರಾದ ಯಮುನಾ ಧರಣೀಶ್.ಎಪಿಎಂಸಿ ಮಾಜಿ ಸದಸ್ಯ ಬಸವರಾಜು.ಗಿರೀಶ್.ಸಿದ್ದು .ನಾಗರಾಜು.ಗಂಗಾಧರ್ ಮುಂತಾದವರು ಉಪಸ್ಥಿತರಿದರು

Verified by MonsterInsights