ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜುಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಲಾಸ್ ತೆಗೆದುಕೊಂಡಿರುವ ಆಡಿಯೋ “ಪ್ರಜಾಕಹಳೆ”ಗೆ ಲಭ್ಯವಾಗಿದೆ.
ತುಮಕೂರು ನಗರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಹಾಗೂ ಜೆಡಿಎಸ್ ಮಾತನಾಡಿರುವ ಎಚ್ಡಿಕೆ ಕಳೆದ ಎರೆಡು ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಗೋವಿಂದರಾಜು ಅವರೇ ಕಾರಣ, ಜನರು ಜೆಡಿಎಸ್ ಗೆ ಮತ ನೀಡಿದರು ಸಹ ಸೋಲಲು ಅಭ್ಯರ್ಥಿಯಾಗಿದ್ದ ಗೋವಿಂದರಾಜು ವರ್ತನೆ ಕಾರಣ ಎಂಬ ಅಂಶವನ್ನು ಹೇಳಿದ್ದಾರೆ.
ಎರಡು ಚುನಾವಣೆಯಲ್ಲಿ ಜೆಡಿಎಸ್ ಪರ ಅಲೆ ಇದ್ದರೂ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣಕ್ಕೆ ಸೋಲನ್ನು ಅನುಭವಿಸಬೇಕಾಯಿತು, ಈ ಬಾರಿ ಜೆಡಿಎಸ್ ಗೆಲ್ಲಲೇಬೇಕು ಅದಕ್ಕಾಗಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಂದಾಗಿ ಚುನಾವಣೆಯನ್ನು ಎದುರಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಹಿಂದೆ ಅರ್ಜಿ ಹಾಕಿದ್ದರೆ ಸಾಕಿತ್ತು, ಆದರೆ ಈಗ ಕಾಲ ಬದಲಾಗಿದೆ, ಕಾರ್ಯಕರ್ತರು, ಮುಖಂಡರ ಕಷ್ಟ ಸುಖ ವಿಚಾರಿಸಬೇಕು, ಇಲ್ಲದಿದ್ದರೆ ಬೇರೆ ಕಡೆ ಹೋಗುತ್ತಾರೆ, ಎಷ್ಟೇ ಅಭಿವೃದ್ಧಿ ಮಾಡಿದ್ದರೂ ಸಹ ನನ್ನ ಕಾರ್ಯಕರ್ತರು ನನ್ನ ಕ್ಷೇತ್ರದಲ್ಲಿ ವಿಚಲಿತರಾದರೆ ಕರೆದು ಮಾತನಾಡಿಸಬೇಕು ಎನ್ನುವ ಪರಿಸ್ಥಿತಿ ಇದೆ ಎಂದಾಗ ಮುಖಂಡರೊಬ್ಬರು ಗೋವಿಂದರಾಜು ಕೇಳಿಸಿಕೊಳ್ಳಿ ಎಂದು ತಿವಿದಿದ್ದಾರೆ.