ಸಹಾಯಕ ನಿರ್ದೇಶಕ ರಾಜಶೇಖರ್ ಎಂಬ ಅಧಿಕಾರಿಯಿಂದ ಹಣಕ್ಕಾಗಿ ಗುಂಡಾವರ್ತನೆ
ತಿಪಟೂರು : ಕಲ್ಪತರು ನಾಡು ತಿಪಟೂರು ಸರ್ಕಾರಿ ಉಪಖಜಾನೆಯಲ್ಲಿ ಲಂಚಾವತಾರ ಮಿತಿ ಮೀರಿದ್ದು ಅಧಿಕಾರಿಯ ಲಂಚದ ಆಸೆಗೆ ಸರ್ಕಾರಿ ನೌಕರರು ಸೇರಿದಂತೆ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ತಿಪಟೂರು ಸರ್ಕಾರಿ ಖಜಾನೆಯ ಸಹಾಯಕ ನಿರ್ದೇಶಕ ಅಧಿಕಾರಿ ರಾಜಶೇಖರ ಪ್ರತಿಯೊಂದು ಕೆಲಸಕ್ಕೂ ಪರ್ಸಟೇಜ್ ಫೀಕ್ಸ್ ಮಾಡಿದ್ದು ಹಣ ನೀಡದಿದ್ದರೆ ಕೆಲಸ ಮಾಡುವುದಿಲ್ಲ ಎಂದು ಅನೇಕ ಭಾರೀ ಮೇಲಾಧಿಕಾರಿಗಳಿಗೂ ದೂರು ನೀಡಿದರು ಯಾವ ಕ್ರಮ ಕೈಗೊಂಡಿಲ್ಲ
ಪಿಂಚಣಿ ಹಾಗೂ ಗುತ್ತಿಗೆ ಕಾಮಗಾರಿ ಬಿಲ್‌ಗಳು ಸೇರಿದಂತೆ ಎಲ್ಲಾ ಕೆಲಸಕ್ಕೂ ಲಂಚ ನೀಡ ಬೇಕಿದೆ ಎಂಬ ಆರೋಪ ಕೇಳಿಬಂದಿದೆ.
ನನ್ನ ಪತಿಯಾದ ಬಸವರಾಜುರವರು ಮರಣ ಹೊಂದಿದ ಕಾರಣ ಪಿಂಚಣಿ ಹಣವನ್ನು ಸರ್ಕಾರಿ ಖಚಾನೆಯಿಂದ ಬಿಡುಗಡೆ ಮಾಡಲು ತಿಪಟೂರು ಉಪಖಚಾನೆಯ ಅಧಿಕಾರಿಯಾದ ಸಹಾಯಕ ನಿರ್ಧೇಶಕ ರಾಜಶೇಖರ್ ಕೇಳಿದಾಗ ಐದು ಸಾವಿರ ರೂಪಾಯಿಗಳ ಲಂಚವನ್ನು ಕೇಳಿದ್ದಾರೆ. ಹಣ ನೀಡಲು ಶಕ್ತಿಯಿಲ್ಲದೆ ಇರುವುದರಿಂದ ಸಾರ್ವಜನಿಕರಲ್ಲಿ ತನ್ನ ಅಳಲನ್ನು ತೋಡಿಕೊಂಡಾಗ ತನ್ನ ಸಹಾಯಕ್ಕೆ ಬಂದವರ ಮೇಲು ಸಹ ದೌರ್ಜನ್ಯ ಎಸಗಿ ಸುಳ್ಳು ಜಾತಿ ನಿಂದನೆ ಬೆದರಿಕೆ ಹಾಕಿರುತ್ತಾರೆ.
-ಕಮಲಮ್ಮ. ನೊಂದ ಮಹಿಳೆ.
ಯಾವುದಾದರೂ ಬಿಲ್ ಖಜಾನೆಗೆ ಹೋದರೆ ಅನಾಗತ್ಯವಾಗಿ ವಿಳಂಬ ಮಾಡಿ ಲಂಚಪಡೆಯುತ್ತಿದ್ದರೆ ಸಾರ್ವಜನಿಕರು ಯಾರಾದರು ಅಧಿಕಾರಿ ಲಂಚಗೊಳಿತನದ ಪ್ರಶ್ನೆ ಮಾಡಿದರೆ ನಿಮ್ಮ ಮೇಲೆ ಜಾತಿ ನಿಂದನೆ ಕೇಸ್ ಹಾಕುತ್ತೇನೆ ಎಂದು ಎದುರಿಸುವುದು, ಸರ್ಕಾರಿ ಅಧಿಕಾರಿಯ ಕೆಲಸಕ್ಕೆ ತೊಂದರೆ ನೀಡಿದ್ದೀರಾ ಎಂದು ಕೇಸ್ ಹಾಕುತ್ತೇನೆ ಎಂದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಾರಂತೆ.
ಲಂಚಕೊಡದಿದ್ದರೆ ನಾನು ಸಹಿ ಮಾಡುವುದಿಲ್ಲ. ನಮ್ಮ ಮೇಲಾಧಿಕಾರಿಗಳು ನಾನು ಹೇಳಿದಂತೆ ಕೇಳುತ್ತಾರೆ ಅವರಿಗೂ ಸಹ ಕಮಿಷನ್ ಕೊಡಬೇಕು, ಯಾರಿಗೆ ಬೇಕಾದರೂ ದೂರು ನೀಡಿ ಎಂದು ಸಾರ್ವಜನಿಕರ ಮೇಲೆ ಗುಂಡಾವರ್ತನೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ಸೋಮವಾರ ಕಮಲಮ್ಮ ಎನ್ನುವ ವಯೋವೃದ್ದ ಮಹಿಳೆ ತಮ್ಮ ಪತಿ ಮರಣಹೊಂದಿದ್ದು ನನ್ನ ಪಿಂಚಣಿ ಪೈಲ್ ಬಂದು ವಾರಗಳೆ ಕಳೆದಿವೆ ಹಣಕಾಸಿನ ತೊಂದರೆಯಿಂದ ಕುಟುಂಬದ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅಂಗಲಾಚಿದರು ಐದು ಸಾವಿರ ಹಣ ನೀಡಿ ಎರಡು ದಿನಗಳಲ್ಲಿ ನಿಮ್ಮ ಪಿಂಚಣಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದು ಅಧಿಕಾರಿಯ ಕಿರುಕುಳದಿಂದ ಬೇಸತ್ತ ಮಹಿಳೆ ಸಂಬಂಧಿಕರೊಂದಿಗೆ ಹಣಕೇಳಲು ಹೋದಾಗ ನಾನು ಸಹಿ ಮಾಡುವುದಿಲ್ಲ, ನಮಗೆ ಬೇರೆ ಕೆಲಸಗಳಿವೆ ಎಂದು ಧಮ್ಕಿ ಹಾಕಿ ಸುಳ್ಳು ಜಾತಿ ನಿಂದನೆ ಕೇಸ್ ಹಾಕುವುದಾಗಿ ಬೆದರಿಸಿದ್ದಾರೆ.
ಪ್ರತಿದಿನ ಖಜಾನೆ ಕೆಲಸ ಕಾರ್ಯಗಳಿಗೆ ಬರುವ ಜನರು ಖಜಾನೆ ಅಧಿಕಾರಿ ರಾಜಶೇಖರ್ ಲಂಚ ಕಿರುಕುಳದಿಂದ ಬೇಸತ್ತಿದ್ದು ಕೂಡಲೇ ತಿಪಟೂರು ಉಪಖಜಾನೆ ಅಧಿಕಾರಿ ರಾಜಶೇಖರ ಅವರನ್ನು ಸರ್ಕಾರಿ ಕೆಲಸದಿಂದ ಅಮಾನತ್ತು ಮಾಡಬೇಕು ಇಲಾಖೆಯಲ್ಲಿ ನಡೆಯುತ್ತಿರುವ ಲಂಚಾವತಾರವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
ತಿಪಟೂರು ಉಪ ಖಚಾನೆಯಲ್ಲಿ ಲಂಚಗುಳಿತನವು ಹೆಚ್ಚಾಗಿದ್ದು, ಕಛೇರಿಗೆ ಬರುವ ಸಾರ್ವಜನಿಕರು, ಗುತ್ತಿಗೆದಾರರು, ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಸಹಾಯಕ ನಿರ್ಧೇಶಕ ರಾಜಶೇಖರ್ ಹಾಗೂ ಅವರ ಸಿಬ್ಬಂದಿ ಹಣಕ್ಕೆ ಬಾರಿ ಬೇಡಿಕೆಯ ಕಾಟವನ್ನು ನೀಡುತ್ತಿರುವುದು ಕಂಡು ಬಂದಿದ್ದು, ಶಿಕ್ಷಣ ಸಚಿವರ ತವರೂರಿನಲ್ಲಿ ಈ ರೀತಿ ಕಂಡುಬರುತ್ತಿರುವುದು ತಾಲ್ಲೂಕಿಗೆ ಅವಮಾನದ ಸಂಗತಿಯಾಗಿದೆ. ಈ ಅಧಿಕಾರಿಯನ್ನು ಕೂಡಲೇ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು.
-ಅಶೋಕ್ ಗೌಡನಕಟ್ಟೆ. ಅದ್ಯಕ್ಷರು ದಲಿತ ಸಂಘರ್ಷ ಸಮಿತಿ