ಸಿಸೇರಿಯನ್ ನಡೆಸಿ ಹಸುವನ್ನು ಬದುಕಿಸಿದ ಪಶುವೈದ್ಯರು

ಡೆಸ್ಕ್
1 Min Read
ಸಿಜೇರಿಯನ್ ಶಸ್ತ್ರಚಿಕಿತ್ಸೆ ಯಶಸ್ವಿ
ಸಿಜೇರಿಯನ್ ಶಸ್ತ್ರಚಿಕಿತ್ಸೆ ಯಶಸ್ವಿ

ತಿಪಟೂರು: ನೊಣವಿನಕೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ರಮೇಶ್ ರವರ ಹಸುವು ಕರು ಹಾಕುವಾಗಕರುವು ಅಸುನೀಗಿ ಹೊರಬರದಂತೆ ಸಮಸ್ಯೆಯಾಗಿ ಮತ್ತು ಒಳಗೇ ಗರ್ಭಕೋಶವು ಹರಿದು ಹಸುವು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಈ ಸಮಯದಲ್ಲಿ ಸ್ಥಳಕ್ಕೆ ಧಾವಿಸಿದ ಪಶು ಆಸ್ಪತ್ರೆ ನೊಣವಿನಕೆರೆಯ ಹಿರಿಯ ಪಶುವೈದ್ಯರಾದ ಡಾ. ಮಂಜುನಾಥ್ ಎಸ್.ಪಿ ರವರು ರೈತರ ಮನೆ ಬಾಗಿಲಿನಲ್ಲೇ ಸಿಸೇರಿಯನ್ ನಡೆಸಿ ಕರುವನ್ನು ಹೊರತೆಗೆದರು. ನಂತರ ಹತ್ತು ದಿನಗಳವರೆಗೆ ಸೂಕ್ತ ಚಿಕಿತ್ಸೆಯನ್ನು ನೀಡಿ ಹಸುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಹೊನ್ನೇನಹಳ್ಳಿ ಗ್ರಾಮಸ್ಥರು ಮನೆ ಬಾಗಿಲಲ್ಲೇ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನಡೆಸಿದ ವೈದ್ಯರಿಗೆ ವಂದನೆಗಳನ್ನು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಗೆ ತುಮಕೂರು ಹಾಲು ಒಕ್ಕೂಟ ದ ಪಶುವೈದ್ಯರಾದ ಡಾ. ಪ್ರಭು ಕಾಳಗಿರವರು ಸಹಕರಿಸಿದರು.

Share this Article
Verified by MonsterInsights