ಅಂಬೇಡ್ಕರ್ ಹೊರತುಪಡಿಸಿದ ಸಂವಿಧಾನವೇ ಅಂಗವೈಕಲ್ಯ

ಡೆಸ್ಕ್
1 Min Read
ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನವನ್ನು ಆಚರಿಸಲಾಯಿತು

ಗುಬ್ಬಿ: ಡಾ.ಬಿಆರ್  ಅಂಬೇಡ್ಕರ್ ಅವರ ಸಂವಿಧಾನಕ್ಕೆ ಸಿಕ್ಕಿರುವಷ್ಟು ಜಾಗತಿಕ ಮನ್ನಣೆ ಬೇರೆ ಗ್ರಂಥಕ್ಕೂ ಸಿಕ್ಕಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಭಾಗಿಯ ಸಂಚಾಲಕ ಚೇಳೂರು ಶಿವನಂಜಪ್ಪ ತಿಳಿಸಿದರು.

ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನವನ್ನು ಆಚರಿಸಿ ನಂತರ ಮಾತನಾಡಿದ ಅವರು ಸಂವಿಧಾನ ಕರ್ತೃ ಡಾ. ಬಿ.ಆರ್.ಅಂಬೇಡ್ಕರ್ ಅವರು ನಮ್ಮನ್ನಗಲಿ ಇಂದಿಗೆ 66ನೇ ವರ್ಷವಾಗಿದ್ದು, ಅವರ ನಿಧನದ ದಿನವನ್ನು ಪರಿನಿರ್ವಾಣ ದಿನ ವೆಂದು ಆಚರಿಸಲಾಗುತ್ತದೆ.
ಡಾ. ಬಿ ಆರ್ ಅಂಬೇಡ್ಕರ್ ಇಹಲೋಕ ತ್ಯಜಿಸಿದ ದಿನ ಈ ಹಿನ್ನೆಲೆ ಪರಿ ನಿರ್ವಹಣಾ ದಿನವನ್ನಾಗಿ ರಾಷ್ಟ್ರದೆಲ್ಲೆಡೆ ಆಚರಿಸಲಾಗುತ್ತಾ ಇದ್ದು, ಗುಬ್ಬಿ ತಾಲೂಕಿನಲ್ಲಿಯೂ ಡಿ ಎಸ್ ಎಸ್ ವತಿಯಿಂದ ಆಚರಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನವನ್ನು ಆಚರಿಸಲಾಯಿತು

ಸಂವಿಧಾನ ರಚನೆಯ ನೆಲೆಗಟ್ಟಿನಿಂದ ವಿಶ್ವದ ಅನೇಕ ಸಂವಿಧಾನಗಳ ಅಧ್ಯಯನ, ಮೀಸಲಾತಿಯ ವಿಸ್ತರಣೆ ಇವುಗಳೇ ಚರ್ಚೆಯ ಆದ್ಯ ಭಾಗವಾಗುತ್ತವೆ. ಅಂಬೇಡ್ಕರರನ್ನು ಹೊರತುಪಡಿಸಿದ ಸಂವಿಧಾನದ ಪರಿಕಲ್ಪನೆ ಅಂಗವೈಕಲ್ಯವೆನಿಸುತ್ತದೆ ಇದರಿಂದ ಆಚೆಗೆ ಬಾಬಾಸಾಹೇಬರನ್ನು ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ ಎಂದೂ ಬೆರಳೆಣಿಕೆಯ ಜನ ನೆನಪಿಸಿಕೊಳ್ಳುತ್ತಿದ್ದಾರೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ನಿಟ್ಟೂರು ಗಂಗಾರಾಮ್ ಮಾತನಾಡಿ ಅಂಬೇಡ್ಕರರನ್ನು ಮತ್ತೊಂದು ಮಜಲಿನಲ್ಲಿ ದೃಷ್ಟಿಸುವ ಅನಿವಾರ್ಯತೆ ಈವರೆಗೂ ಕಾಣಿಸಿದಂತಿಲ್ಲ. ಅದು ಅವರೊಳಗಿನ ರಾಷ್ಟ್ರೀಯ ಪ್ರಜ್ಞೆ. ವಾಸ್ತವವಾಗಿ ಅಂಬೇಡ್ಕರ್‌ ಅವರೊಳಗೆ ಐಕ್ಯತೆ, ರಾಷ್ಟ್ರ ಪ್ರೇಮ ಜಾಗೃತ ಜ್ಯೋತಿ ಆಗಿತ್ತು. ಆ ಅದಮ್ಯ ಧ್ಯೇಯವನ್ನು ಸಾರ್ವತ್ರಿಕವಾಗಿ ವಿಮರ್ಶೆಗೆ ಹಚ್ಚಿದ್ದು ತೀರಾ ವಿರಳ ಎಂದು ತಿಳಿಸಿದರು.

ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಸಿ ಗಾಯನದ ಮುಖೇನ ಶ್ರದ್ದಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ , ನಾಗಭೂಷಣ್ , ಬಸವರಾಜ್, ನರೇಂದ್ರ ಕುಮಾರ್, ಮನು (ಕುರಿ), ಮಧು, ಅಭಿಷೇಕ್, ಮಂಜುನಾಥ್, ಶ್ರೀಧರ್, ಸೇರಿದಂತೆ ದಲಿತ ಮುಖಂಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Share this Article
Verified by MonsterInsights