ತುಮಕೂರು: ಮುಂಬರುವ ಚುನಾವಣೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಬಾಣಾವರ ಗೇಟ್ ನಲ್ಲಿ ಗ್ರಾಮಾಂತರ ಬಿಜೆಪಿ ಶಕ್ತಿಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದ ತಕ್ಷಣ ಜನಪ್ರಿಯ ಶಾಸಕರಾಗುತ್ತಾರೆ ಆದರೆ ಸುರೇಶ್ ಗೌಡ ಅವರು ಶಾಸಕರಿಗೆ ಮೀರಿದ ಜನಪ್ರಿಯತೆಯನ್ನು ಹೊಂದಿದ್ದಾರೆ ಎಂದರು.
ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಸುರೇಶ್ ಗೌಡರು ಸಾಕಷ್ಟು ಶ್ರಮಿಸಿದ್ದಾರೆ, ಅದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ ಇದೇ ಮುಂದಿನ ಚುನಾವಣೆಯ ದಿಕ್ಸೂಚಿಯಾಗಲಿದೆ, ಕಾರ್ಯಕರ್ತರು, ಜನರು ಸುರೇಶ್ ಗೌಡ ಅವರ ಬೆನ್ನಿಗೆ ಇದ್ದಾರೆ ಎಂದು ಅಭಿಪ್ರಾಯಪಟ್ಟರು
ನಾನು ಏನೇ ತಪ್ಪು ಮಾಡಿದ್ದರು ಕ್ಷಮಿಸಿ, ಎಲ್ಲ ಗೊಂದಲವನ್ನು ಮರೆತು ಬಿಜೆಪಿಯನ್ನು ಗೆಲ್ಲಿಸಲು ಎಲ್ಲರೂ ಸಂಘಟಿತ ಹೋರಾಟ ಮಾಡಬೇಕು. ಗೋಪಾಲಯ್ಯ ಅವರು ಗ್ರಾಮಾಂತರ ಕ್ಷೇತ್ರದ ಉಸ್ತುವಾರಿಯಾಗಿರುವುದು ಆನೆಬಲವನ್ನು ತಂದಿದೆ.
-ಬಿ.ಸುರೇಶ್ ಗೌಡ, ಮಾಜಿ ಶಾಸಕ
ಚುನಾವಣಾ ಸಂಘರ್ಷ ಎಲ್ಲ ಕಾಲದಲ್ಲಿಯೂ ಇರುತ್ತದೆ, ಈ ಬಾರಿ ಸುರೇಶ್ ಅವರ ಬೆನ್ನಿಗೆ ನಿಂತು, ನಾನೇ ಸುರೇಶ್ ಗೌಡ ಎನರನುವ ಭಾವನೆಯಿಂದ ಚುನಾವಣೆಯಲ್ಲಿ ಶ್ರಮಿಸಬೇಕು, ಗೆಲುವು ಸಾಧಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಸಚಿವರಾದ ಗೋವಿಂದಕಾರಜೋಳ, ಬಿ.ಸಿ.ನಾಗೇಶ್, ಗೋಪಾಲಯ್ಯ, ಆರ್.ರವೀಶ್, ಮಾಸ್ತಿಗೌಡ, ಸಿದ್ದೇಗೌಡ, ಸಿದ್ಧರಾಜು, ಹೊಳಕಲ್ಲು ಆಂಜಿನಪ್ಪ, ರಮೇಶ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.