ಲೋಕಸಭೆ ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ (SIDDARAMAIAH) ಅವರು ಡಿ.ಕೆ.ಶಿವಕುಮಾರ್ (D.K.SHIVAKUMAR)ಗೆ ಅಧಿಕಾರ ಹಸ್ತಾಂತರ ಮಾಡುತ್ತಾರೆ, ಹೈಕಮಾಂಡ್ ವಲಯದಲ್ಲಿ ಚರ್ಚೆ ಆಗಿದೆ ಎನ್ನುವ ಮಾತುಗಳ ಮಧ್ಯೆದಲ್ಲಿಯೇ 2 ವರ್ಷ ಕಳೆದರೆ 8 ವರ್ಷ ಡಿಕೆಶಿ ಮುಖ್ಯಮಂತ್ರಿ ಆಗಿ ಅಧಿಕಾರ ಚಲಾಯಿಸಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಸದ್ಯ ಡಿಸಿಎಂ ಆಗಿರುವ ಡಿಕೆಶಿ ಅವರ ಜಾತಕ ಫಲದ ಪ್ರಕಾರ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಜ್ಯೋತಿಷಿ ಆರಾಧ್ಯ ಎಂಬುವರು ಭವಿಷ್ಯ ನುಡಿದಿರುವುದಾಗಿ ವರದಿಯಾಗಿದೆ.
ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಸರ್ಕಾರಿ ಬಂಗಲೆಯಲ್ಲಿ ವಾಸ ಮಾಡುವಂತೆ ಸಲಹೆ ನೀಡಿದ್ದು, ರಾಜ್ಯದಲ್ಲಿ ಎಂಟು ವರ್ಷಗಳ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.