ಮೊಬೈಲ್ ಆಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚುವರಿ ಹಣ ಮಾಡಲು ಹೋದ ವ್ಯಕ್ತಿಗೆ 14 ಲಕ್ಷಕ್ಕೆ ಪಂಗನಾಮ ಹಾಕಿರುವ ಪ್ರಕರಣ ತುಮಕೂರು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತುಮಕೂರು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ವಾಸವಾಗಿರುವ ವ್ಯಕ್ತಿ ಮೊಬೈಲ್ ಗೆ ಬಂದ ಮೇಸೇಜ್ ನಲ್ಲಿ metatrader5 ಮೊಬೈಲ್ ಅಪ್ಲೀಕೇಷನ್ ನಲ್ಲಿ ಹೂಡಿಕೆ ಮಾಡಿದರೆ, ಉತ್ತಮ ಲಾಭಾಂಶ ಬರುತ್ತದೆ ಎಂಬುದನ್ನು ನಂಬಿ ಮೊದಲಿಗೆ 2500 ರೂಪಾಯಿ ಹೂಡಿಕೆ ಮಾಡಿದ್ದಾರೆ.
metatrader5 ಸಂಸ್ಥೆ ವಿವಿಧ ಖಾತೆಗಳಿಗೆ, ಯುಪಿಐ ಐಡಿಗಳಿಗೆ 14,75,346 ರೂಪಾಯಿಗಳು ಹಾಕಿದ ನಂತರ ಹಣವನ್ನು ಹಾಕುವಂತೆ ಕೇಳಿದಾಗ ಡಾಲರ್ ಟು ರೂಪಾಯಿ ಕನ್ವರ್ಟಿಂಗ್ ಪ್ರೊಸೆಸ್ ಚಾರ್ಜ್ ಎಂದು 4,51,246 ರೂಪಾಯಿಗಳನ್ನು ಹಾಕಿಸಿಕೊಂಡಿದ್ದು, ಹಣ ನೀಡದೇ ಮೋಸ ಮಾಡಿದ್ದಾರೆ ಎಂದು ಠಾಣೆಗೆ ದೂರು ನೀಡಿದ್ದಾರೆ.